Belagavi NewsBelgaum NewsKannada NewsKarnataka News

ವ್ಯಾಪಾರ – ವಾಣಿಜ್ಯ ಪ್ರಕೋಷ್ಟದ ಸದಸ್ಯರಾಗಿ ಜ್ಯೋತಿ ಶೆಟ್ಟಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತೀಯ ಜನತಾ ಪಾರ್ಟಿಯ ವ್ಯಾಪಾರ – ವಾಣಿಜ್ಯ ಪ್ರಕೋಷ್ಟದ  ರಾಜ್ಯ ಸಮಿತಿಯ ಸದಸ್ಯರನ್ನಾಗಿ ಬೆಳಗಾವಿಯ ಜ್ಯೋತಿ ದೀಪಕ್ ಶೆಟ್ಟಿ ಅವರನ್ನು  ಭಾರತೀಯ ಜನತಾ ಪಕ್ಷದ  ವ್ಯಾಪಾರ ವಾಣಿಜ್ಯ ಪ್ರಕೋಷ್ಟದ ರಾಜ್ಯ ಸಂಚಾಲಕ  ವಿಜಯಕುಮಾರ ಕುಡಿಗನೂರು ನಿಯುಕ್ತಿ ಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯದ ವಿವಿಧ 20ಪ್ರಕೋಷ್ಟಗಳ ಸಂಚಾಲಕ ಎಸ್.ದತ್ತಾತ್ರಿ ಅವರು ಇಂದು ಬೆಂಗಳೂರಿನಲ್ಲಿ ಜ್ಯೋತಿ ಶೆಟ್ಟಿ ಅವರಿಗೆ ವ್ಯಾಪಾರ ವಾಣಿಜ್ಯ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ ಕುರಿತು ಪ್ರಮಾಣ ಪತ್ರ ನೀಡಿದರು.

Home add -Advt

ಈ  ಸಂದರ್ಭದಲ್ಲಿ ರಾಜ್ಯ ಪ್ರಕೋಷ್ಟದ ಸಂಚಾಲಕ ವಿಜಯಕುಮಾರ ಕುಡಿಗನೂರು, ಸಹ ಸಂಚಾಲಕ ಭವಾನಿ ಮೋರೆ ಸೇರಿದಂತೆ ವಿವಿಧ ಪ್ರಕೋಷ್ಟಗಳಿಗೆ ನೂತನವಾಗಿ ಆಯ್ಕೆಯಾದ ಸಂಚಾಲಕರು ಉಪಸ್ಥಿತರಿದ್ದರು. 

Related Articles

Back to top button