Latest

ಪ್ರೇಮಿಗಳ ದಿನ ಡಿಸಿ-ಸಿಇಓ ಮಧ್ಯೆ ಪ್ರೇಮ ವಿವಾಹ!

  

Home add -Advt

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗೌತಮ ಬಗಾದಿ ಇದೇ 14 ರಂದು ವಿವಾಹವಾಗಲಿದ್ದಾರೆ.

ಸಧ್ಯ ಅವರು ದಾವಣಗೇರೆ ಜಿಲ್ಲಾಧಿಕಾರಿಯಾಗಿದ್ದು, ಅಲ್ಲಿಯೇ ಜಿಲ್ಲಾ ಪಂಚಾಯಿತಿ ಸಿಇಓ ಆಗಿರುವ ಅಶ್ವತಿ ಅವರನ್ನು ಬಗಾದಿ ಮದುವೆಯಾಗಲಿದ್ದಾರೆ.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಪ್ರೇಮಿಗಳ ದಿನವೇ ಕೇರಳದಲ್ಲಿ ಪರಸ್ಪರ ಕೈ ಹಿಡಿಯಲಿದ್ದಾರೆ. 

ಬಗಾದಿ ವಿಶಾಖಪಟ್ಟಣದವರು, ಅಶ್ವತಿ ಕೇರಳದ ಕಲ್ಲಿಕೋಟೆಯವರು. ಅಶ್ವತಿ ಕಳೆದ ಎರಡೂವರೆ ವರ್ಷದಿಂದ ದಾವಣಗೆರೆ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೌಚಾಲದ ನಿರ್ಮಾಣ ಸೇರಿದಂತೆ ಉತ್ತಮ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ. ಬಗಾದಿ 4 ತಿಂಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದಾರೆ. 

ಪ್ರೇಮ ಅಂಕುರಿಸಿದ ಮೇಲೆ ಬಗಾದಿ ದಾವಣಗೆರೆಗೆ ಆಗಮಿಸಿದರೋ, ಆಗಮಿಸಿದ ಮೇಲೆ ಪ್ರೇಮ ಅಂಕುರಿಸಿತೋ ಇನ್ನೂ ಬಹಿರಂಗವಾಗಿಲ್ಲ. 

 

Related Articles

Back to top button