GamesSportsTravel

*ಐಪಿಎಲ್ ಮುಂದಿನ ಪಂದ್ಯಗಳು ನಡೆಸುವ ಬಗ್ಗೆ ಇಂದು ನಿರ್ಧಾರ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನದ ನಡುವಿನ ಯುದ್ಧದ ಕಾರಣ ಐಪಿಎಲ್ ಪಂದ್ಯಗಳು ಮುಂದೂಡಲಾಗಿತ್ತು. ಇದೀಗ ಕದನ ವಿರಾಮ ಘೋಷಣೆಯಾದ ನಂತರ ಮುಂದಿನ ವಾರದಿಂದ ಟೂರ್ನಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ಬಿಸಿಸಿಐ ಮಂಡಳಿಯ ಅಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಇಂದು ಹೈ ವೋಲ್ವೇಜ್‌ ಸಭೆ ನಡೆಸಲಿದ್ದು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

Home add -Advt

ಪಂದ್ಯಾವಳಿಯನ್ನು ಪೂರ್ಣಗೊಳಿಸಲು ಯಾವುದು ಉತ್ತಮ ವೇಳಾಪಟ್ಟಿ ಎಂದು ಚರ್ಚೆ ನಡೆಯಲಿದೆ. ಲೀಗ್ ಅನ್ನು ದಕ್ಷಿಣ ಭಾರತದ ನಗರಗಳಾದ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಗೆ ಸ್ಥಳಾಂತರಿಸಬಹುದು ಎಂದು ಊಹಿಸಲಾಗಿದೆ.

ಈಗಾಗಲೇ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ತೆರಳುವ ಮನಸ್ಸು ಮಾಡಿದ್ದು ಫ್ರಾಂಚೈಸಿ ಗಳು ತೀವ್ರ ಗೊಂದಲದಲ್ಲಿದ್ದಾರೆ. ವಿದೇಶಿ ನೆಲದಲ್ಲಿಯೇ ಪಂದ್ಯ ಆಯೋಜನೆಗೂ ಕೂಡ ಚಿಂತನೆ ನಡೆದಿದೆ.

Related Articles

Back to top button