
ಪ್ರಗತಿವಾಹಿನಿ ಸುದ್ದಿ: ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಈ ಭಾಗದಲ್ಲಿ ರೈಲು ಸಂಚಾರ ದಿಢೀರ್ ರದ್ದಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಅಹಿತಿ ನೀಡಿದೆ.
ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಪೆನುಕೊಂಡ ಮತ್ತು ರಂಗೇಪಲ್ಲಿ ನಡುವಿನ ರೈಲು ಹಳಿ ನವೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 66559 ಕೆಎಸ್‌ಆರ್ ಬೆಂಗಳೂರು-ಅನಂತಪುರ ಮೆಮು ರೈಲನ್ನು ಮಂಗಳವಾರ ಹಿಂದೂಪುರದಿಂದ ಅನಂತಪುರದವರೆಗಿನ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ.
ಅದೇ ರೀತಿ, ರೈಲು ಸಂಖ್ಯೆ 66560 ಅನಂತಪುರ-ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು ಅನಂತಪುರದಿಂದ ಹಿಂದೂಪುರದವರೆಗೆ ರದ್ದುಗೊಳಿಸಲಾಗಿದೆ.
ಇದರೊಂದಿಗೆ, ರೈಲು ಸಂಖ್ಯೆ 12864 ಎಸ್‌ಎಂವಿಟಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನೂ ನವೆಂಬರ್ 3ರಂದು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಈ ಬಗ್ಗೆ ಗಮನಹರಿಸಿ ತಮ್ಮಾ ಪ್ರಯಾಣ ನಡೆಸುವಂತೆ ಕೋರಲಾಗಿದೆ.




