Kannada NewsLatest

ನನ್ನ ಹೆಂಡತಿ ಕಿಡ್ನ್ಯಾಪ್ ಆಗಿದ್ದಾಳೆ ಎಂದ ಪ್ರೇಮಕವಿ; ಉಲ್ಟಾ ಹೊಡೆದ ಪತ್ನಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಚಿತ್ರರಂಗದ ಪ್ರೇಮಕವಿ ಖ್ಯಾತಿಯ ಜನಪ್ರಿಯ ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ನನ್ನ ಪತ್ನಿ ಅಶ್ವಿನಿಯನ್ನು ಅಪಹರಿಸಿದ್ದಾರೆ ಎಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ಕೆ.ಕಲ್ಯಾಣ್ ದೂರು ನೀಡಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆ ಕೆ.ಕಲ್ಯಾಣ್ ತಮ್ಮ ಪತ್ನಿ ಕಿಡ್ಯಾಪ್ ಆಗಿದ್ದಾಳೆ. ಬಾಗಲಕೋಟೆಯ ಶಿವಾನಂದ ವಾಲಿ ಎಂಬಾತ ಅಶ್ವಿನಿಯನ್ನು ಅಪಹರಿಸಿದ್ದು, ಆಕೆಯ ಅಕೌಂತ್ ನಿಂದ 19 ಲಕ್ಷ ರೂ. ಹಣವನ್ನು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

Home add -Advt

ಕಲ್ಯಾಣ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅಶ್ವಿನಿಯನ್ನು ಇದೀಗ ಠಾಣೆಗೆ ಕರೆ ತಂದಿರುವ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ತನ್ನನ್ನು ಯಾರೂ ಅಪಹರಿಸಿಲ್ಲ. ಪತಿ ಕೆ.ಕಲ್ಯಾಣ್ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಪ್ರೇಮಕವಿ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೆ.ಕಲ್ಯಾಣ್ ದೂರಿಗೂ ಪತ್ನಿಯ ಹೇಳಿಕೆಗೂ ಸಾಕಷ್ಟು ಗೊಂದಲಗಳಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

Related Articles

Back to top button