ಮೂವರ ಪ್ರಾಣಕ್ಕೆ ಎರವಾಯ್ತು ವೀಕೆಂಡ್ ಟ್ರಿಪ್

ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ: ವೀಕೆಂಡ್ ಎಂಜಾಯ್ ಮಾಡಲು ಬೆಂಗಳೂರಿನಿಂದ ಬಂದಿದ್ದ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಸೇರಿದಂತೆ ಮೂವರು ವಿದ್ಯಾರ್ಥಿಗಳು ಇಲ್ಲಿನ ಶ್ರೀನಿವಾಸ ಸಾಗರ ಡ್ಯಾಂನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಮ್ರಾನ್ ರಾಧಿಕಾ ಹಾಗೂ ಪೂಜಾ ಮೃತಪಟ್ಟವರು. ಡಿ ಫಾರ್ಮಾ ಓದುತ್ತಿರುವ ಒಟ್ಟು ಆರು ವಿದ್ಯಾರ್ಥಿಗಳು ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಡ್ಯಾಂಗೆ ಬೇರೆಬೇರೆ ಬೈಕ್ ಗಳಲ್ಲಿ ಬಂದಿದ್ದರು. ಇವರೆಲ್ಲ ನೀರಿನಲ್ಲಿ ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

Home add -Advt

ಕಲ್ಲುಗಳ ಮೇಲೆ ನಡೆಯುತ್ತ ನೀರಿನಾಳಕ್ಕೆ ಹೋದಾಗ ಒಬ್ಬ ವಿದ್ಯಾರ್ಥಿನಿ ನೀರುಪಾಲಾಗಿದ್ದಾಳೆ. ಅವಳ ರಕ್ಷಣೆಗೆ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ಇವರಲ್ಲಿ ಇನ್ನಿಬ್ಬರು ಕೂಡ ನೀರಿನಲ್ಲಿ ಮುಳುಗಿಹೋಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

https://pragati.taskdun.com/tumakuru-siddhagangedr-prabhakara-koresatkarashivakumara-swamiji-116th-jayantotsava/
https://pragati.taskdun.com/application-invitation-from-state-govt-employees/
https://pragati.taskdun.com/belgaum-newly-married-couple-dies-in-a-terrible-accident/

Related Articles

Back to top button