Latest

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮೇಲೆ ಕಲ್ಲು ತೂರಾಟ; ತೀವ್ರ ಗಾಯ

ಪ್ರಗತಿವಾಹಿನಿ ಸುದ್ದಿ, ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿ ಹಲ್ಲೆ ನಡೆಸಿದ್ದಾರೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ಅವರು ರೋಡ್ ಶೋ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Related Articles
Home add -Advt

ಕಲ್ಲು ತೂರಾಟದಿಂದ ಪರಮೇಶ್ವರ ಅವರ ತಲೆಗೆ ಗಾಯವಾಗಿದೆ. ತಕ್ಷಣ ಬಟ್ಟೆಗಳಿಂದ ಅವರ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಲಾಯಿತಲ್ಲದೆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಏಪ್ರಿಲ್ 19ರಂದು ಕೊರಟಗೆರೆ ಕ್ಷೇತ್ರದಿಂದ ಜಿ.ಪರಮೇಶ್ವರ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ವೇಳೆ ಕಲ್ಲು ತೂರಾಟ ನಡೆದಿತ್ತು. ಅಪರಿಚಿತರು ಕಲ್ಲು ಎಸೆದ ನಂತರ ಗೊಂದಲ ಉಂಟಾಗಿ ಈ ಘಟನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಈಗ ಡಾ. ಪರಮೇಶ್ವರ್ ಅವರ ಮೇಲೆ ನೇರ ದಾಳಿ ನಡೆದಿದೆ.

https://pragati.taskdun.com/committed-to-the-development-of-kalyan-karnataka-chief-minister-basavaraja-bommai-road-show-even-in-pouring-rain/
https://pragati.taskdun.com/i-have-developed-the-constituency-as-per-the-referendum-lakshmi-hebbalkar/
https://pragati.taskdun.com/amit-shah-lost-his-mental-composure-sudham-das-criticizes/

Related Articles

Back to top button