TravelWorld

*ನೂರ್ ಖಾನ್ ವಾಯುನೆಲೆ ಮೇಲೆ ದಾಳಿ ಆಗಿದ್ದು ನೀಜ: ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್*

ಪ್ರಗತಿವಾಹಿನಿ ಸುದ್ದಿ: ಭಾರತ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಪಾಕಿಸ್ತನಾದ ನೂರ್ ಖಾನ್ ವಾಯುನೆಲೆ ಮತ್ತು ಇತರ ಸ್ಥಳಗಳನ್ನು ಹೊಡೆದಿವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೊನೆಗೂ ಒಪ್ಪಿಕೊಂಡಿದ್ದಾರೆ. 

ಭಾರತದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಹಲವು ಸತ್ಯ ವಿಚಾರಗಳನ್ನು ಮುಚ್ಚಿಟ್ಟು ವಾಯುನೆಲೆಗಳ ಧ್ವಂಸವನ್ನು ಹಲವು ಬಾರಿ ನಿರಾಕರಿಸಿದ ಬಳಿಕ ಇದೀಗ ಅದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30 ರ ಸುಮಾರಿಗೆ ದಾಳಿಗಳ ಬಗ್ಗೆ ವರದಿ ಮಾಡಲು ತಮಗೆ ಕರೆ ಮಾಡಿದ್ದಾರೆ ಎಂದು ಷರೀಫ್ ಹೇಳಿದರು. ಪಾಕಿಸ್ತಾನದ ವಾಯುಪಡೆಯು ಸ್ಥಳೀಯ ತಂತ್ರಜ್ಞಾನ ಮತ್ತು ಚೀನಿ ಜೆಟ್‌ಗಳನ್ನು ಬಳಸಿರುವುದನ್ನು ಷರೀಫ್ ಉಲ್ಲೇಖಿಸಿದ್ದಾರೆ ಜೊತೆಗೆ ಭಾರತದ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೊಡೆದಿವೆ ಎಂದು ದೃಢಪಡಿಸಿದ್ದಾರೆ.

Related Articles

Back to top button