*ಎದುರಾಳಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಸಿದ್ದರಾಮಯ್ಯ; ವರುಣಾದಲ್ಲಿ ಯಡಿಯೂರಪ್ಪ ಬಂದರೂ ಸ್ವಾಗತ ಎಂದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ವಿಧನಸಭಾ ಅಖಾಡ ರಂಗೇರಿದ್ದು, ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಸಾಧ್ಯತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಎದುರಾಳಿ ಯಾರು ಎಂಬುದು ಮುಖ್ಯವಲ್ಲ, ಜನರ ಅಭಿಪ್ರಾಯವೇ ಮುಖ್ಯ. ಎದುರಾಳಿ ಯಾರಾದರೂ ತಲೆ ಕೆಡಿಸಿಕೊಳ್ಳಲ್ಲ, ಗೆಲುವು ಮಾತ್ರ ನಮ್ಮದೇ ಎಂದರು.

Home add -Advt

ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎದುರಾಳಿ ಯಾರಾದರೇನು? ಸ್ವತ: ಯಡಿಯೂರಪ್ಪನವರೇ ಬಂದರೂ ಸ್ವಾಗತ ಮಾಡ್ತೇವೆ ಎಂದು ಟಾಂಗ್ ನೀಡಿದರು.

https://pragati.taskdun.com/karnatakarainupdateimd/

Related Articles

Back to top button