Latest

ಎನ್ನೆಸ್ಸೆಸ್ ಶಿಬಿರದಲ್ಲಿ ಗಣಕ ಯಂತ್ರ ಬಳಕೆ ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ರಾಯಬಾಗ:

ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ನೆಸ್ಸೆಸ್ ಕ್ಯಾಂಪ್‌ನ ೪ನೇ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ’ವಿಜ್ಞಾನಕ್ಕಾಗಿ ಯುವಕರು ಮತ್ತು ಗಣಕ ಯಂತ್ರದ ಮಹತ್ವ’ ಕುರಿತು ವಿಶೇಷ ಉಪನ್ಯಾಸ ಶಿಬಿರ ಆಯೋಜಿಸಲಾಗಿತ್ತು.

Home add -Advt
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಜಿಲ್ಲಾ ಯುವಪರಿವರ್ತಕ ಮಹಮದ್ ಅಜರುದ್ದೀನ ಉಸ್ಮಾನ ಶೇಖಜಿ ಮಾತನಾಡಿ, ಜೀವನದಲ್ಲಿ ಹೇಗೆ ಗುರಿ ಮುಟ್ಟಬೇಕು ಎಂಬ ಕುರಿತು ಹಾಗೂ ತಂದೆ-ತಾಯಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾಗೀರಥಿ ಹಾಲಳ್ಳಿ ಉಪನ್ಯಾಸ ನೀಡಿದರು. ಶ್ರದ್ಧಾ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಸುಭಾಷ ಕಚಕರಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎನ್ನೆಸ್ಸೆಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

Related Articles

Back to top button