Kannada NewsLatestNational

*ಕೆಸರು ಕೈಗಳಿಂದ ಸೈಕಲ್ ಟಚ್ ಮಾಡಿದ್ದಕ್ಕೆ 5 ವರ್ಷದ ಬಾಲಕಿಯನ್ನೇ ಕೊಲೆಗೈದ ಯುವಕ*

ಪ್ರಗತಿವಾಹಿನಿ ಸುದ್ದಿ; ಲಖನೌ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ 5 ವರ್ಷದ ಬಾಲಕಿಯನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ರಾಮಚಂದ್ರಾಹಿ ಗ್ರಾಮದಲ್ಲಿ ನಡೆದಿದೆ.

ಆರೋಪಿ ದೀಪಕ್ (21) ನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕ ದೀಪಕ್ ತನ್ನ ಮನೆಯ ಮುಂದೆ ಸೈಕಲ್ ನಿಲ್ಲಿಸಿದ್ದ. 5 ವರ್ಷದ ಬಾಲಕಿಯೊಬ್ಬಳು ಮಣ್ಣಾದ ಕೈಗಳಿಂದ ಸೈಕಲ್ ಸೀಟ್ ಮುಟ್ಟಿದ್ದಾಳೆ. ಇಷ್ಟಕ್ಕೆ ಯುವಕ ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

Home add -Advt

ದೀಪಕ್ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್ ನ್ನು ಪಕ್ಕದ ಮನೆಯ 5 ವರ್ಷದ ಬಾಲಕಿ ಮುಟ್ಟಿದ್ದಾಳೆ. ಸೈಕಲ್ ಸೀಟ್ ಮಣ್ಣಾದ ಕಾರಣಕ್ಕೆ ಕೋಪಗೊಂಡ ಯುವಕ ಹರಿತವಾದ ಆಯುಧದಿಂದ ಬಾಲಕಿಯ ಕತ್ತು ಸೀಳಿ ಕೊಂದಿದ್ದಾನೆ.

ಮಗುವನ್ನು ಕಳೆದುಕೊಂಡ ಕುಟುಂಬದವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಯುವಕನ ಕೃತ್ಯಕ್ಕೆ ಇಡೀ ಗ್ರಾಮವೇ ಉದ್ವಿಗ್ನಗೊಂಡಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಆರೋಪಿ, ಟೆರೇಸ್ ಮೇಲಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ ಎರಡೂ ಕಾಲುಗಳನ್ನು ಮುರಿದುಕೊಂಡಿದ್ದಾನೆ.

ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾತನನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button