Latest

ಲೋಕೋಳಿ ಕ್ರಾಸ್ ಬಳಿ ರಸ್ತೆ ಅಪಘಾತ: ಓರ್ವ ಸಾವು


   ಪ್ರಗತಿವಾಹಿನಿ ಸುದ್ದಿ, ಖಾನಾಪುರ

ತಾಲ್ಲೂಕಿನ ಪಾರಿಶ್ವಾಡ ರಸ್ತೆಯ ಲೋಕೋಳಿ ಕ್ರಾಸ್ ಬಳಿ ಸೋಮವಾರ ದ್ವಿಚಕ್ರ ವಾಹನ ಮತ್ತು ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿ ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾರೆ.

Home add -Advt

ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದ ಸೋಮನಾಥ ಹಲಗೇಕರ (26) ಮೃತಪಟ್ಟಿದ್ದು, ಅದೇ ಗ್ರಾಮದ ನಾರಾಯಣ ಹಲಗೇಕರ ಗಾಯಗೊಂಡಿದ್ದಾರೆ. ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ತೋಪಿನಕಟ್ಟಿ ಗ್ರಾಮದತ್ತ ಹೊರಟಿದ್ದ ಸೋಮನಾಥ ಮತ್ತು ನಾರಾಯಣ ಅವರಿಗೆ ಲೋಕೋಳಿ ಕ್ರಾಸ್ ಬಳಿ ಹಿಂದಿನಿಂದ ಬಂದ ಲಾರಿ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸೋಮನಾಥ ಅವರ
ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾರಾಯಣ ಅವರ ಕಾಲಿಗೆ ಬಲವಾದ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಮೋತಿಲಾಲ ಮತ್ತು ಪಿಎಸ್ಐ ಬಸನಗೌಡ ಪಾಟೀಲ ಭೇಟಿ ನೀಡಿದ್ದು, ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button