Kannada NewsKarnataka NewsLatest

ಭೌತಿಕ ರೂಪದ ಕಾಮಗಾರಿಗಳು, ಕ್ಷೇತ್ರದ ಜನತೆಯೇ ನನ್ನ ಸಾಧನೆಗೆ ಸಾಕ್ಷಿ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಜನತೆಯ ಪ್ರೀತಿ, ವಿಶ್ವಾಸ, ನಂಬಿಕೆಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಅತ್ಯಂತ ಜವಾಬ್ದಾರಿಯುತವಾಗಿ ಸೇವೆ ಮಾಡಿ, ನನ್ನ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸುವ ದೃಢ ಸಂಕಲ್ಪ ಹೊಂದಿದ್ದೇನೆ. ಈ ಸಂಕಲ್ಪ ಸಾಧನೆಗೆ ಈ ನಿಮ್ಮ ಮನೆ ಮಗಳನ್ನು ಮತ್ತೊಮ್ಮೆ ಆಶೀರ್ವದಿಸಬೇಕು” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೋರಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಜಯನಗರಲ್ಲಿ ನೂತನ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

Home add -Advt

“ಪ್ರತಿಪಕ್ಷದ ಶಾಸಕಿಯಾಗಿಯೂ ಆಡಳಿತ ಪಕ್ಷದ ಶಾಸಕರಿಗಿಂತ ಅಧಿಕ ಪ್ರಮಾಣದ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಕ್ಷೇತ್ರದಲ್ಲಿ ಮಾಡಿರುವುದು ಕೇವಲ ಬಾಯಿಮಾತಿನ ಸಾಧನೆಯಲ್ಲ. ಭೌತಿಕವಾದ ಕಾಮಗಾರಿಗಳು, ಅವುಗಳ ಲೋಕಾರ್ಪಣೆಯಲ್ಲಿ ಪಾಲ್ಗೊಂಡ ಜನತೆ ಎಲ್ಲದಕ್ಕೂ ಜ್ವಲಂತ ಸಾಕ್ಷಿ. ಇದೇ ರೀತಿ ಇನ್ನೊಮ್ಮೆ ಅವಕಾಶ ನೀಡಿದಲ್ಲಿ ಕ್ಷೇತ್ರದ ಹೆಸರು ಅಭಿವೃದ್ಧಿಯ ದಾಖಲೆಗಳಲ್ಲಿ ಅಗ್ರ ಸ್ಥಾನದಲ್ಲಿರುವಂತೆ ಮಾಡುವ ಸಂಕಲ್ಪ ನನ್ನದಾಗಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಕಪಿಲ ಸಾಂಬ್ರೇಕರ್, ಸಂಜಯ ಕದಂ, ರಾಹುಲ್ ಉರಣಕರ್, ಚಂದ್ರಕಾಂತ ಗವಿಮಠ, ಸಂಜಯ ಮಗದುಮ್, ದಯಾನಂದ ಸರ್ನೋಬತ್, ಗ್ರಾಮ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.

https://pragati.taskdun.com/mla-lakshmi-hebbalakar-initiated-the-construction-of-community-building/
https://pragati.taskdun.com/mla-lakshmi-hebbalakar-initiated-the-construction-of-gardens-in-various-parts-of-hindalaga/
https://pragati.taskdun.com/b-s-yedyurappaamith-shahb-y-vijayendrach/

Related Articles

Back to top button