Kannada NewsKarnataka NewsLatest
ಮನೆ ಕಟ್ಟಲು ಮುಂದೆ ಬರುವವರಿಗೆ ಬುಡಾದಿಂದ ಕೂಡಲೇ ಎನ್ಒಸಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈಗಾಗಲೇ ಬುಡಾ ಲೇಔಟ್ ನಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟದೇ ಖಾಲಿ ಬಿಟ್ಟಿರುವ ನಿವೇಶನದಾರರು ಮನೆ ನಿರ್ಮಿಸಲು ಮುಂದೆ ಬಂದರೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ತ್ವರಿತ ನಿರಾಕ್ಷೇಣ ಪತ್ರ (ಎನ್.ಒ.ಸಿ) ನೀಡಲಿದೆ ಎಂದು ಅಧ್ಯಕ್ಷ ಘೂಳಪ್ಪಾ ಹೊಸಮನಿ ತಿಳಿಸಿದ್ದಾರೆ.
ಈಗಾಗಲೇ ಮನೆ ಕಟ್ಟದೇ ಇರುವ ನೂರಾರು ನಿವೇಶನದಾರರಿಗೆ ನೊಟೀಸ್ ಕಳಿಸಲಾಗಿದ್ದು, ನೋಟೀಸ್ ಗಳಿಗೆ ಸ್ಪಂದಿಸಿ ಮನೆ ನಿರ್ಮಿಸಲು ಮುಂದಾದ ಅನೇಕರಿಗೆ ನಿರಾಕ್ಷೇಣಾ ಪತ್ರ ನೀಡಲಾಗಿದೆ.
ಆರು ತಿಂಗಳೊಳಗೆ ಮನೆ ಕಟ್ಟುವ ನಿಯಮಗಳನ್ನು ಗಾಳಿಗೆ ತೂರಿರುವ ನಿವೇಶನದಾರರ ಮೇಲೆ ಬುಡಾ ಕಣ್ಣಿಟ್ಟದೆ ಎಂದೂ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ದ ಆಯುಕ್ತ ಪ್ರೀತಂ ನಸ್ಲಾಪುರೆ ಹಾಗೂ ಸಿಬ್ಬಂದಿ ಈ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿಂದ ನಗರದ ಎಲ್ಲ ಖಾಲಿ ನಿವೇಶನಗಳ ಸರ್ವೇ ನಡೆಸಿದ್ದಾರೆ ಎಂದರು.


