Belagavi NewsBelgaum NewsCrimeKannada NewsKarnataka NewsNational
*ಬಣ್ಣ ಆಡುವಾಗ ಮಹಾರಾಷ್ಟ್ರ ನಾಡ ಗೀತೆಗೆ ಪುಂಡರ ಡ್ಯಾನ್ಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋಳಿ ಹಬ್ಬದ ಆಚರಣೆ ವೇಳೆಯೂ ಎಂಇಎಸ್ ಕಿರಿಕ್ ಮಾಡಿದ್ದು, ಮಹಾರಾಷ್ಟ್ರ ನಾಡ ಗೀತೆಗೆ ಯುವಕರು ಡ್ಯಾನ್ಸ್ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಬೆಳಗಾವಿ ನಗರದ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಹೋಳಿ ಹಬ್ಬದ ನಿಮಿತ್ಯ ಬಣ್ಣ ಆಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಜೈ ಮಹಾರಾಷ್ಟ್ರ ಎಂದು ಪೋಸ್ಟರ ಪ್ರದರ್ಶನ ಮಾಡಲಾಗಿದೆ.
ಜೊತೆಗೆ ಬೆಳಗಾವಿ ಮಹಾರಾಷ್ಟ್ರ ರಾಜ್ಯದ ಪರ ಘೋಷಣೆ ಹಾಕಿ ಮಹಾರಾಷ್ಟ್ರ ನಾಡ ಗೀತೆ ಹಚ್ಚಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




