Film & EntertainmentKarnataka NewsLatestNationalPolitics

*ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಭಾರಿ ಮುನ್ನಡೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನೇರವಾಗಿ ವಿಜಯ್ ಮನೆಗೆ ಆಗಮಿಸಿದ ನಟಿ ತ್ರಿಷಾ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಇದೇ ಮೊದಲ ಬಾರಿ ಹೊಸ ಪಕ್ಷದೊಂದಿದೆ ಚುನಾವಣೆಯಲಿ ಸ್ಪರ್ಧಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಭಾರಿ ಮುನ್ನಡೆ ಸಾಧಿಸಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ತೀವ್ರ ಹಿನ್ನಡೆಯಲ್ಲಿದ್ದು, ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 112 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ನಟ ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Home add -Advt

ಚುನಾವಣಾ ಫಲಿತಾಂಶದ ಹೊತ್ತಲ್ಲೇ ನಟ ವಿಜಯ್ ಗೆಳತಿ ನಟಿ ತ್ರಿಷಾ ಕೃಷ್ಣನ್ ಇಂದು ಮುಂಜಾನೆಯೇ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಂದು ತ್ರಿಷಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮದ ಜೊತೆಗೆ ಗೆಳೆಯನ ಚುನಾವಣಾ ಗೆಲುವಿನ ಸಂಭ್ರಮ ಕೂಡ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನೇರವಾಗಿ ನಟಿ ತ್ರಿಷಾ, ದಳಪತಿ ವಿಜಯ್ ಅವರ ಚೆನ್ನೈನ ನಿವಾಸಕ್ಕೆ ಆಗಮಿಸಿದ್ದಾರೆ. ಚುನಾವಣಾ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ನಟ ವಿಜಯ್ ಕೆಲ ವರ್ಷಗಳಿಂದ ತ್ರಿಷಾ ಅವರೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಕೂಡ ನಟಿಯೊಬ್ಬರ ಜೊತೆ ವಿಜಯ್ ಗೆ ಸಂಬಂಧವಿದೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ವಿಜಯ್ ಹಾಗೂ ತ್ರಿಷಾ ಕೆಲ ಮದುವೆ ಸಮಾರಂಭಗಳಲ್ಲಿಯೂ ಒಂದೇ ಕಾರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ತಮಿಳುನಾಡು ಚುನಾವಣಾ ಫಲಿತಾಂಶದಂದು ಟಿವಿಕೆ ಪಕ್ಷ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ ತ್ರಿಷಾ ನೇರವಾಗಿ ವಿಜಯ್ ಮನೆಗೆ ಆಗಮಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ.


Related Articles

Back to top button