
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಶಾಲೆ ಶಿಕ್ಷಕಿ ಕೋಪದ ಬರದಲ್ಲಿ ಬೀಸಿದ ಕೋಲು ವಿದ್ಯಾರ್ಥಿಯ ಕಣ್ಣಿಗೆ ತಾಗಿ ವಿದ್ಯಾರ್ಥಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ಶಿಕ್ಷಕಿಯ ಏಟಿಗೆ ವಿದ್ಯಾರ್ಥಿ ಒಂದು ವರ್ಷದ ಬಳಿಕ ದೃಷ್ಟಿ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಷಕರು ನ್ಯಾಯಕ್ಕಾಗಿ ಚಿಂತಾಮಣಿಯ ಬಿಇಒ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಯಶವಂತ್ ದೃಷ್ಟಿ ಕಳೆದುಕೊಂಡಿರುವ ವಿದ್ಯಾರ್ಥಿ. ಯಗವಕೋಟೆಯ ನಟರಾಜ್ ಹಾಗೂ ಅಂಕಿತಾ ದಂಪತಿಯ ಪುತ್ರ. ಯಶವಂತ್ ಯಗನಕೋಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿ. ಆತ ಒಂದನೇ ತರಗತಿಯಲ್ಲಿದ್ದಾಗ ಶಾಲೆಯ ಶಿಕ್ಷಕಿ ಸರಸ್ವತಿ ಕುಳಿತ ಜಾಗದಿಂದಲೇ ಕೋಪಕ್ಕೆ ಕೋಲು ಬೀಸಿದ್ದರು. ಕೋಲು ಯಶವಂತ್ ಕಣ್ಣಿಗೆ ತಾಗಿತ್ತು. ಯಶವಂತ್ ಕಣ್ಣಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಈಗ ಒಂದು ವರ್ಷದ ಬಳಿಕ ವಿದ್ಯಾರ್ಥಿ ತನ್ನ ಕಣ್ಣುಕಳೆದುಕೊಂಡಿದ್ದಾನೆ.
ಶಿಕ್ಷಕಿ ಸರಸ್ವತಿ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ.