Kannada NewsKarnataka NewsLatest

*ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಸಹ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Home add -Advt

ರಾಯಚೂರು ಜಿಲ್ಲೆಯ ಉಡುಮಗಲ್ ಖಾನಾಪುರ ಶಾಲೆಯ ಸಹಶಿಕ್ಷಕ ಕೆ.ರಾಮು ಸಸ್ಪೆಂಡ್ ಆದವರು. ಏ.7ರಂದು ಕೆ.ಪಿ.ನಂಜುಂಡಿ ನಿವಾಸಕ್ಕೆ ಸಹ ಶಿಕ್ಷಕ ಕೆ.ರಾಮು ಆಗಮಿಸಿದ್ದರು.

ಅಂದು ಕೆ.ಪಿ.ನಂಜುಂಡಿ ಮನೆಗೆ ಉಪಹಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ರಾಜಕೀಯ ನಾಯಕರಿಗೆ ಕೆ.ರಾಮು ಉಪಹಾರ ಬಡಿಸಿದ್ದರು. ಶಿಕ್ಷಕ ಊಟ, ಉಪಹಾರ ಬಡಿಸುತ್ತಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು.

ಈ ಬಗ್ಗೆ ರಾಯಚೂರು ಜಿಲ್ಲಾ ಚುನಾವಣಾಧಿಕಾರಿ ತನಿಖೆ ನಡೆಸಿದ್ದರು. ತನಿಖೆ ಬಳಿಕ ಸಹಶಿಕ್ಷಕ ಕೆ.ರಾಮುನನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎ.ಚಂದ್ರಶೇಖರ್ ನಾಯಕ್ ಆದೇಶ ಹೊರಡಿಸಿದ್ದಾರೆ.


Related Articles

Back to top button