Uncategorized

ಭೀಕರ ಅಪಘಾತ: 10 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಮೈಸೂರು: ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನರು ಸಾವಿಗೀಡಾಗಿದ್ದಾರೆ.

ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕೊಳ್ಳೇಗಾಲ ಹಾಗೂ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿ ಅಪಘಾತ ನಡೆದಿದೆ. ಮೃತರೆಲ್ಲ ಬಳ್ಳಾರಿಯವರು ಎಂದು ಗೊತ್ತಾಗಿದೆ.

Home add -Advt

ಇನ್ನೋವಾ ಕಾರು ಬಸ್‌ಗೆ ಡಿಕ್ಕಿಯಾಗಿದ್ದು, ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇತರರು ಆಸ್ಪತ್ರೆಗೆ ಸಾಗಿಸುವಾಗಿ ಮೃತರಾಗಿದ್ದಾರೆ.

ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ, ಪರಿಹಾರ ಘೋಷಿಸಿದ್ದಾರೆ.

https://pragati.taskdun.com/arrest-bjp-mp-immediately-siddaramaiah/

Related Articles

Back to top button