Kannada NewsKarnataka NewsLatest

ತುರ್ತು ಸಭೆ ಕರೆದ ಚೆಂಬರ್ ಆಫ್ ಕಾಮರ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಚೆಂಬರ್ ಆಫ್ ಕಾಮರ್ಸ್ ಆ್ಯಾಂಡ್ ಇಂಡಸ್ಟ್ರೀಸ್ ಮತ್ತು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಶನ್ ಬುಧವಾರ ತುರ್ತು ಸಭೆ ಕರೆದಿದೆ. ಅಂದು ಸಂಜೆ 5.30ಕ್ಕೆ ಸಭೆ ನಡೆಯಲಿದೆ.

ಪ್ರಗತಿವಾಹಿನಿ ಪ್ರಕಟಿಸಿರುವ Smart city officials forgotten industrial area ಸುದ್ದಿಯ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು, ಎಲ್ಲ ಸದಸ್ಯರು ಆಗಮಿಸಬೇಕೆಂದು ಕೋರಿದೆ. ಹೆಸ್ಕಾಂ, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಸಹ ಸಭೆಗೆ ಆಹ್ವಾನಿಸಲಿದೆ.

ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಧರ ಉಪ್ಪಿನ್ ಮತ್ತು ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಅಸೋಸಿಯೇಶನ್ ಅಧ್ಯಕ್ಷ ರೋಹನ್ ಜುವಳಿ ಈ ಸಭೆಯನ್ನು ಆಯೋಜಿಸಿದ್ದಾರೆ.

ಉದ್ಯಮಬಾಗ್ ಕೈಗಾರಿಕೆ ಪ್ರದೇಶ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದ್ದು, ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಚೆಗೆ ಶಾಸಕ ಅಭಯ ಪಾಟೀಲ ಅವರು ರಾಜ್ಯ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಉದ್ಯಮಬಾಗ್ ಪ್ರದೇಶಕ್ಕೆ ಕರೆಸಿ ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಿಸಿದ್ದಾರೆ.

ಇದರ ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲೂ ಉದ್ಯಮಬಾಗ್ ಪ್ರದಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಬೆಳಗಾವಿ ಸ್ಮಾರ್ಟ್ ಸಿಟಿಯಾಗುತ್ತಿರುವ ಸಂದರ್ಭದಲ್ಲಿ ಉದ್ಯಮಬಾಗ್ ದಂತಹ ಪ್ರಮುಖ ಪ್ರದೇಶವನ್ನು ಕೈಬಿಟ್ಟಿರುವುದು ಸರಿಯಲ್ಲಿ ಎನ್ನುವ ಅಭಿಪ್ರಾಯ ಉದ್ಯಮಿಗಳಲ್ಲಿದೆ.

ಇದನ್ನೂ ಓದಿ – Smart city officials forgotten industrial area

ಉದ್ಯಮಬಾಗ ಕೈಗಾರಿಕಾ ಪ್ರದೇಶ ಪರಿಶೀಲಿಸಿದ ಸಚಿವ ಜಗದೀಶ ಶೆಟ್ಟರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button