Kannada NewsNational

*ಮತ್ತೊಂದು ಹೆಲಿಕ್ಯಾಪ್ಟರ್ ಅಪಘಾತ: 6 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಗುಜರಾತನ್ ಅಹಮದಾಬಾದ್  ನಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿಮಾನ ಪತನಾವಾಗಿ 241 ಜನ ಸಾವನ್ನಪ್ಪಿದರು. ಇದರ ಬೆನ್ನಲೆ ಮತ್ತೊಂದು ಹೆಲಿಕ್ಯಾಪ್ಟರ್ ದುರಂತ ಸಂಭವಿಸಿದೆ.

ಚಾರ್ ಧಾಮ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಒಂದು ಅಪಘಾತಕ್ಕೀಡಾಗಿದ್ದು, ಪೈಲಟ್ ಸೇರಿ 6 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೌರಿಕುಂಡ್ ಪ್ರದೇಶದಲ್ಲಿ ನಡೆದಿದೆ. 

Home add -Advt

ಭಾನುವಾರ ಮುಂಜಾನೆ ಗೌರಿಕುಂಡ್ ದಿಂದ ಘಾಟಾ ಪ್ರದೇಶಕ್ಕೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಐವರು ಯಾತ್ರಿಕರು, ಪೈಲಟ್ ಇದ್ದ ಹೆಲಿಕ್ಯಾಪ್ಟರ್ ನಲ್ಲಿ ಯಾರೂ ಜೀವಂತವಾಗಿ ಉಳಿದಿಲ್ಲ.

ಕೆಟ್ಟ ಹವಾಮಾನವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಧಾವಿಸಿದೆ. ಇನ್ನು ಹೆಚ್ಚಿನ ಮಾಹಿತಿಗಳು ನಿರಿಕ್ಷಿಸಲಾಗಿದೆ. 

Related Articles

Back to top button