
89 ಸಿಬ್ಬಂದಿಯಿಂದ ರಕ್ತದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವ ಉಳಿಸಿದಂತಾಗುತ್ತದೆ. ಅಂತಹ ಕಾರ್ಯಕ್ಕೆ ಯುವಕರು ಮುಂದಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ವಿಧಾನ ಪರಿಷತ್ ನೂತನ ಸದಸ್ಯರೂ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಹರ್ಷ ಸಕ್ಕರೆ ಕಾರ್ಖಾನೆ, ಲಕ್ಷ್ಮಿ ತಾಯಿ ಸೌಹಾರ್ದ ಸಹಕಾರಿ ಹಾಗೂ ಕೆಎಲ್ಇಎಸ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಒಟ್ಟೂ 89 ಸಿಬ್ಬಂದಿ ರಕ್ತದಾನ ಮಾಡಿದರು. ಪ್ರಧಾನ ವ್ಯವಸ್ಥಾಪಕರಾದ ಸದಾಶಿವ ತೋರಾಟ್, ಎನ್.ಎಂ.ಪಾಟೀಲ್, ಸಿಎಒ ಯು.ಸಿ.ಚೌಕಿಮಠ, ಕಾರ್ಖಾನೆಯ ಎಲ್ಲ ಸಿಬ್ಬಂದಿ, ಡಿ.ಡಿ.ತೋಪಾಜಿ, ಮಹಾಂತೇಶ ಮತ್ತಿಕೊಪ್ಪ, ಸುರೇಶ್ ಬಡಗಿಗೌಡರ್, ವಿಷ್ಣು ಮೋಹಿತೆ, ಬಗವಾನ್ ಖಡೆ, ಬಂಡು ಬಿಟ್ಟಡೆ, ಶಿವಾನಂದ ಖಾನಾಪುರ್ ಹಾಗೂ ಕೆಎಲ್ಇ ಆಸ್ಪತ್ರೆ ಸಿಬ್ಬಂದಿ ಇದ್ದರು.
ಇಬ್ಬರು ಮಕ್ಕಳು ಸೇರಿ ರಾಜ್ಯದಲ್ಲಿ ಒಂದೇ ದಿನ 12 ಜನರಲ್ಲಿ ಒಮಿಕ್ರಾನ್ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ