
ಪ್ರಗತಿವಾಹಿನಿ ಸುದ್ದಿ : ಬಿಜೆಪಿ ಜಿಲ್ಲಾಧ್ಯಕ್ಷರುಗಳ ನೇಮಕ ಕುರಿತು ಹೈಕಮಾಂಡ್‌ಗೆ ರಾಜ್ಯ ಬಿಜೆಪಿಯು ಫೈನಲ್ ಲಿಸ್ಟ್ ಕಳುಹಿಸಿದೆ.
ಮಂಡ್ಯ ಜಿಲ್ಲೆಗೆ ಇಂದ್ರೇಶ್, ಗದಗ-ರಾಜು ಕುರಡಗಿ, ಬಾಗಲಕೋಟೆಗೆ ಎಸ್.ಟಿ. ಪಾಟೀಲ್, ವಿಜಯಪುರಕ್ಕೆ ಗುರುಲಿಂಗಪ್ಪ ಅಂಗಡಿ, ರಾಯಚೂರು- ವೀರನಗೌಡ ಲೆಕ್ಕಿಹಾಳ, ಮಧುಗಿರಿ-ಚಿದಾನಂದ ಗೌಡ (ಪರಿಷತ್ ಸದಸ್ಯ), ರಾಮನಗರ-ಆನಂದ್ ಸ್ವಾಮಿ, ಬೆಂಗಳೂರು ಗ್ರಾಮಾಂತರಕ್ಕೆ ರಾಮಕೃಷ್ಣಪ್ಪ ಹೆಸರುಗಳನ್ನ ಅಂತಿಮಗೊಳಿಸಲಾಗಿದೆ.
ಇನ್ನು ಹಾಸನ, ಮೈಸೂರು ಗ್ರಾಮಾಂತರ, ಉಡುಪಿ, ಕೊಡಗು, ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಹಾವೇರಿ ಜಿಲ್ಲಾಧ್ಯಕ್ಷರ ನೇಮಕವನ್ನು ರಾಜ್ಯ ಬಿಜೆಪಿ ಕಾಯ್ದಿರಿಸಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ವಿಚಾರವು ಸಂಸದ ಡಾ.ಸುಧಾಕರ್ ಮತ್ತು ವಿಜಯೇಂದ್ರ ನಡುವಿನ ಕಾಳಗಕ್ಕೆ ಕಾರಣವಾಗಿತ್ತು.