ಹುಚ್ಚಾ ವೆಂಕಟ್ ಗೆ ಥಳಿತ

ಹುಚ್ಚಾ ವೆಂಕಟ್ ಗೆ ಥಳಿತ

ಪ್ರಗತಿವಾಹಿನಿ ಸುದ್ದಿ, ಮಡಿಕೇರಿ –
 ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ನಟ ಹುಚ್ಚಾ ವೆಂಕಟ್‌ ಇಂದು ಮಡಿಕೇರಿ ನಗರದಲ್ಲಿ ದಾಂಧಲೆ ನಡೆಸಿ ಥಳಿತಕ್ಕೊಳಗಾಗಿದ್ದಾರೆ.
  ಮಡಿಕೇರಿ ರಸ್ತೆಯಲ್ಲಿ ಕಾರಿನ ಗ್ಲಾಸ್‌ ಒಡೆದು ಪುಂಡಾಟ ಪ್ರದರ್ಶಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ವೆಂಕಟ್‌ಗೆ ಗೂಸಾ ನೀಡಿದ್ದಾರೆ.
ತೆರೆ ಮೇಲೆ ಆ್ಯಕ್ಷನ್‌ ಸೀನ್‌ಗಳನ್ನು ಮಾಡುತ್ತಿದ್ದ ನಟ ಇಂದು ಕ್ಯಾಮರಾ ನೋಡುತ್ತಿದ್ದಂತೆ ರಿಯಲ್‌ ಆ್ಯಕ್ಷನ್ ಸೀನ್‌ ಶುರು ಮಾಡಿಕೊಂಡಿದ್ದಾರೆ. ಕಾರಿನ ಗ್ಲಾಸ್‌ಗೆ ಕಲ್ಲು ಎಸೆದು, ಡೋರ್‌ ಹಿಡಿದು ಮುರಿಯುವ ಸಾಹಸಕ್ಕೆ ಕೈ ಹಾಕಿದ್ದು, ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದಾರೆ.
ಕಾರಿನ ಮಾಲೀಕನಿಗೆ ಧಮ್ಕಿ ಹಾಕುತ್ತಾ ನೀನೇನು ರೌಡಿನಾ? ಯಾರು ಯಾರಿಗೆ ಕರೆ ಮಾಡುತ್ತಿಯೋ ಮಾಡು ನಾನು ಇಲ್ಲೇ ಇರುತ್ತೇನೆ. ಕರ್ನಾಟಕದಲ್ಲಿ ನನ್ನನ್ನ ಅಣ್ಣಾ ಅಂತಾರೆ. ಯಾವೂರಿನಿಂದ ನೀನು ಬಂದಿದ್ದೀಯಾ? ಇಲ್ಲಿ ಏನೇ ನಡೆದರೂ ಕ್ಯಾಮರಾ ಇರಬೇಕು ಎಂದು ಆವಾಜ್‌ ಹಾಕಿದ್ದಾರೆ.  ಮಡಿಕೇರಿ ಟೌನ್ ಪೋಲಿಸರು ಸ್ಥಳಕ್ಕೆ  ಭೇಟಿ ನೀಡಿ ಪುಂಡಾಟ ಪ್ರದರ್ಶಿಸಿದ ಹುಚ್ಚಾ ವೆಂಕಟ್ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

Home add -Advt

Related Articles

Back to top button