
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು, ರೌಡಿಶೀಟರ್ ಗಳ ಪರೇಡ್ ನಡೆಸಿದರು
ಬೆಳಗಾವಿ ಜಿಲ್ಲಾ ಪೊಲೀಸ್ ಪರೇಡ್ ಆವರಣದಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇತೃತ್ವದಲ್ಲಿ ಕಮಿಷನರ್ ವ್ಯಾಪ್ತಿಯ 13 ಪೊಲೀಸ್ ಠಾಣಾ ವ್ಯಾಪ್ತಿಯ 220ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಲಾಯಿತು.
ಬೆಳಗಾವಿಯಲ್ಲಿ ಅಶ್ವತ್ಥಾಮ ಮಂದಿರಕ್ಕೆ ಕಲ್ಲೇಸೆತ, ಬುರ್ಖಾ ಧರಿಸಿ ಡ್ಯಾನ್ಸ್ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿರುವ ಕಾರಣ ಅಲರ್ಟ್ ಆಗಿರೋ ಬೆಳಗಾವಿ ನಗರ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ರೌಡಿಗಳ ಪರೇಡ್ ನಡೆಸಿದ್ದಾರೆ.
ಕಮ್ಯುನಲ್ ರೌಡಿಗಳು, ನಾರ್ಕೋಟಿಕ್ಸ್ ರೌಡಿಗಳು, ಸೋಷಿಯಲ್ ಮಿಡಿಯಾದಲ್ಲಿ ಕಮ್ಯುನಲ್ ಪೋಸ್ಟ್ ಹಾಕಿದವರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕ್ರೈಮ್ ಹಿಸ್ಟ್ರಿ ಹೊಂದಿದವರು ಬಾಲಬಿಚ್ಚದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.