Kannada NewsKarnataka NewsLatest
ಯುವ ಜನತೆ ಜಾಗ್ರತರಾದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ – ಚನ್ನರಾಜ ಹಟ್ಟಿಹೊಳಿ

ಮೊಬೈಲ್ ಕಡಿಮೆ ಮಾಡಿ, ಮೈದಾನಕ್ಕಿಳಿಯಿರಿ – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಬೆಳಗಾವಿ – ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿದೆ. ಅವುಗಳನ್ನು ಸ್ವಲ್ಪ ನಿಯಂತ್ರಿಸಿ ಮೈದಾನಕ್ಕಿಳಿದು ಮೈ, ಮನ ದಣಿಯುವಂತಹ ಆಟವಾಡಿ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದ್ದಾರೆ.

ಯುವಕರು ಸಾಮಾಜಿಕವಾಗಿ, ರಾಜಕೀಯವಾಗಿ ಜಾಗ್ರತರಾಗಬೇಕು. ನಮ್ಮ ಗ್ರಾಮ, ನಮ್ಮ ಸಮಾಜಕ್ಕೆ ಏನು ಬೇಕು ಎನ್ನುವುದನ್ನು ಗಟ್ಟಿಯಾಗಿ ಮಂಡಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ರಾಜಕೀಯ ವ್ಯವಸ್ಥೆ ಹೇಗಿರಬೇಕು? ನಮಗೆ ಎಂತಹ ಜನಪ್ರತಿನಿಧಿಗಳು ಬೇಕು? ಯಾರು ನಿರಂತರವಾಗಿ ಸಂಪರ್ಕಕ್ಕೆ ಸಿಗುತ್ತಾರೆ? ಯಾರು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ ಎನ್ನುವುದನ್ನು ಅರಿತು ಪ್ರೋತ್ಸಾಹಿಸಬೇಕು. ಯುವ ಜನತೆ ಜಾಗ್ರತರಾದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಕಳೆದ 3 ವರ್ಷದಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಾಣುತ್ತಿದ್ದೇವೆ. ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುತ್ತಿದ್ದಾರೆ. ತಾವು ನಿಜ ಅರ್ಥದಲ್ಲಿ ಜನಪ್ರತಿನಿಧಿ, ಜನರ ಸೇವಕಿ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ಜನರು ಇಂತಹ ಜನಪ್ರತಿನಿಧಿಯನ್ನು ನಿರಂತರ ಬೆಂಬಲಿಸಿ, ಪ್ರೋತ್ಸಾಹಿಸಬೇಕು. ಆಗ ಮಾತ್ರ ಸಮಾಜ, ಗ್ರಾಮ ಸುಧಾರಣೆ ಸಾಧ್ಯ ಎಂದು ಅವರು ಹೇಳಿದರು.
ಉದ್ಘಾಟನೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಣ್ಣ ಕಲ್ಲೂರ, ಗ್ರಾಮ ಪಂಚಾಯತ್ ಮಾಜಿಸದಸ್ಯರಾದ ಕೇಸರಖಾನ್ ಮುಲ್ಲಾ, ಯಲ್ಲಪ್ಪ ಮುಗಳಿ, ಬಾಬು ಕಾಳೆ, ಪ್ರಕಾಶ ದಾನೋಜಿ, ಕಲ್ಲಪ್ಪ ಕಮ್ಮಾರ, ಬಸವರಾಜ ಕಲ್ಲೂರ, ಗ್ರಾಮದ ಯುವಕರು, ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ