Karnataka News

*ಈ ಕಳ್ಳರಿಗೆ ಪಾರ್ಕಿಂಗ್ ಮಾಡಿದ ಕಾರುಗಳೆ ಟಾರ್ಗೆಟ್*

ಪ್ರಗತಿವಾಹಿನಿ ಸುದ್ದಿ: ಕಾರ್ ಗ್ಲಾಸ್ ಬ್ರೇಕ್ ಮಾಡಿ ಖತರ್ನಾಕ್ ಗ್ಯಾಂಗ್‌ ಹಣ ದೋಚಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಮೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಮಾಡಿದ್ದ ಕಾರುಗಳನ್ನೇ ಟಾರ್ಗೆಟ್ ಮಾಡಿ ಗ್ಲಾಸುಗಳನ್ನ ಒಡೆದು, ಒಂದು ಕಾರಿನಲ್ಲಿದ್ದ ಹಣವನ್ನು ದೋಚಿರುವ ಘಟನೆ ನಡೆದಿದ್ದು ಕಳ್ಳತನದ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ನಗರದ ದುರ್ಗಿಗುಡಿ ಖಾಸಗಿ ಹೆರಿಗೆ ಆಸ್ಪತ್ರೆಯ ಬಳಿ ನಿಂತಿದ್ದ ಕಾರಿನ ಗ್ಲಾಜು ಒಡೆದು ಕಳ್ಳರ ಗ್ಯಾಂಗ್ ಹಣ ದೋಚಿ ಪರಾರಿಯಾಗಿದೆ. ಒಬ್ಬ ಕಾರಿನ ಗ್ಲಾಸ್‌ ಒಡೆದ್ರೆ ಇನ್ನೊಬ್ಬ ಕಾರಿನಲ್ಲಿದ್ದ ಹಣ ಎಗರಿಸಿದ್ದಾನೆ. ನಗರದ ವಿವಿಧೆಡೆ ಖರ್ತನಾಕ್ ಗ್ಯಾಂಗ್ ಕಾರ್ ಗ್ಲಾಸ್ ಬ್ರೇಕ್ ಮಾಡಿ ನಾಲ್ಕು ಲಕ್ಷಕ್ಕೂ ಅಧಿಕ ಹಣ ಎಗರಿಸಿದೆ.

Home add -Advt

ಶಿವಮೊಗ್ಗ ನಗರದಲ್ಲಿರುವ ಪ್ರತಿಷ್ಠಿತ ಸರ್ಜಿ ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿರುವ ಕಾರು, ಪಿಂಗಾರದ ಮುಂದೆ ನಿಂತ ಕಾರು ಮತ್ತೊಂದು ಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button