Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಮೂರು ವರ್ಷದ ಮಗುವನ್ನು ಹೊಡೆದು ಕೊಂದ ತಂದೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವನ್ನು ಒಲೆಯಲ್ಲಿರುವ ಕಟ್ಟಿಗೆಯಿಂದ ತಲೆ, ಕೈ, ಎದೆಗೆ ಮನಬಂದಂತೆ ಹೊಡೆದು ಕೊಂದಿರುವ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ತಂದೆ ಮತ್ತು ಆತನ ಗೆಳೆಯರು ಸೇರಿ ಮೂರು ವರ್ಷದ ಗಂಡು ಮಗುವನ್ನು ಕೊಲೆ ಮಾಡಿದ್ದಾರೆ.

ಬಿಹಾರ ಮೂಲದ ಕಾರ್ತಿಕ್ ಮುಕೇಶ್ ಮಾಜಿ (3) ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ನಡುವೆ ವೈಮನಸ್ಸಿದ್ದು ತಾಯಿ ಅಡುಗೆ ಮಾಡುವಾಗ ಒಲೆಯಲ್ಲಿರುವ ಬೆಂಕಿಯ ಕಟ್ಟಿಗೆಯನ್ನು ತೆಗೆದುಕೊಂಡು ಬಾಲಕನ ತಲೆಗೆ, ಬೆನ್ನಿಗೆ, ಕೈಯಗಳಿಗೆ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ ವೀರಯ್ಯ ಹಿರೇಮಠ, ನೇಸರಗಿ ಸಿಪಿಐ ಗಜಾನನ ನಾಯ್ಕ, ಪಿ ಎಸ್ ವಾಹಿದ್ ಯಾದವಾಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button