Kannada NewsKarnataka NewsLatest

*ಮಹಾಘಟಬಂಧನ್ JDS ಮುಳುಗಿಹೋಗಿದೆ ಎಂಬ ಭ್ರಮೆಯಲ್ಲಿದೆ; HDK ಟಾಂಗ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ 2 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ವಿಪಕ್ಷಗಳ ಮಹಾ ಮೈತ್ರಿಕೂಟ ಸಭೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮಹಾಘಟಬಂಧನ್ ನಮ್ಮನ್ನು ಲೆಕ್ಕಕ್ಕೇ ಇಟ್ಟಿಲ್ಲ, ಮಹಾಘಟಬಂಧನ್ ಸಭೆ ಆಯೋಜಿಸಿದವರು ಪಾಪ ಜೆಡಿಎಸ್ ಮುಳುಗಿ ಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

Home add -Advt

ಆಹ್ವಾನ ಕೊಟ್ಟರೋ, ಇಲ್ಲವೋ ಅನ್ನೋದಕ್ಕೆ ತಲೆಕೆಡಿಸಿಕೊಳ್ಳಲ್ಲ. ನೋಡೋಣ ಎಂದು ಹೇಳಿದರು. ಇದೇ ವೇಳೆ ಎನ್ ಡಿ ಎ ಸಭೆಯಲ್ಲಿ ಭಾಗಿಯಾಗುತ್ತೀರಾ ಎಂಬ ಸುದ್ದಿಗಾರರ್ ಪ್ರಶ್ನೆಗೆ, ಇನ್ನೂ ದಿನಗಳಿವೆ. ಎಲ್ಲೂ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ.


Related Articles

Back to top button