
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಕೊನೆ ದಿನವಾದ ಇಂದು ಭಾರತಕ್ಕೆ 5ನೇ ಚಿನ್ನದ ಪದಕ ಒಲಿದು ಬಂದಿದ್ದು, ಬ್ಯಾಂಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಚಿನ್ನದ ಪದಕ ಗೆದ್ದಿದ್ದಾರೆ.
ಬ್ಯಾಡ್ಮಿಂಟನ್ ಮೆನ್ಸ್ ಸಿಂಗಲ್ಸ್ ಎಸ್ ಹೆಚ್ 6 ವಿಭಾಗದ ಫೈನಲ್ ಪಂದ್ಯದಲ್ಲಿ ಹ್ಯಾಕಾಂಗ್ ನ ಚೂ ಮನ್ ಕೈ ವಿರುದ್ಧ ಗೆಲುವು ಸಾಧಿಸಿದ ಕೃಷ್ಣ ನಗರ್ ಮೊದಲ ಸೆಟ್ ನಲ್ಲಿ 21-17 ಅಂತರದಿಂದ ಮೇಲುಗೈ ಸಾಧಿಸಿದ್ದಾರೆ.
ಇದೇ ವೇಳೆ ಪ್ಯಾರಾಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕನ್ನಡದ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ಕಂಪ್ಯೂಟರ್ ಎಂಜಿನಿಯರ್ ಓದಿರುವ ಸುಹಾಸ್ ಐಎ ಎಸ್ ಪಾಸ್ ಆಗಿ 2020ರಿಂದ ನೊಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದೇ ಸಿಗುತ್ತಾ ಅನುಮತಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ