
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ ಅವರನ್ನು ಸಂಚಾರಿ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅಪರಾಧ ಮತ್ತು ತಾಂತ್ರಿಕ ಸೇವಾ ವಿಭಾಗದಲ್ಲಿದ್ದ ಆರ್.ಹಿತೇಂದ್ರ ಅವರನ್ನು ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಅಪರಾಧ ಮತ್ತು ತಾಂತ್ರಿಕ ಸೇವಾ ವಿಭಾಗಕ್ಕೆ ಆಡಳಿತ ವಿಭಾಗದಲ್ಲಿದ್ದ ಉಮೇಶ ಕುಮಾರ ಅವರನ್ನು ವರ್ಗಾಯಿಸಲಾಗಿದೆ. ಆಡಳಿತ ವಿಭಾಗಕ್ಕೆ ಕಂಪ್ಯೂಟರ್ ವಿಂಗ್ ನಲ್ಲಿದ್ದ ಸೌಮೇಂದು ಮುಖರ್ಜಿ ಅವರನ್ನು ವರ್ಗಾಯಿಸಲಾಗಿದೆ.
*ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆ*
https://pragati.taskdun.com/two-childrenmissing-casedead-body-found/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ