
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮುಂದುವರೆಯಲಿದೆ. ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಮಾ ಎಚ್ಚರಿಕೆ ನೀಡಲು ಸಾರಿಗೆ ನೌಕರರು ಉಲ್ಲಂಘಿಸಿರುವ ನಿಯಮವಾದರು ಏನು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಲಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ, ಸರ್ಕಾರ ಮಾತುಕತೆಗೆ ಇನ್ನೂ ಮುಂದಾಗಿಲ್ಲ. ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆಸರಿಯುವ ಮಾತೇ ಇಲ್ಲ. ನಾಳೆಯಿಂದ ಅನಿರ್ಧಿಷ್ಟಾವಧಿಗೆ ಮುಷ್ಕರ ಮುಂದುವರೆಯಲಿದೆ ಎಂದರು. ಕೊರೊನಾ ನಿಯಮಗಳನ್ನು ಪಾಲಿಸಿಯೇ ಶಾಂತಿಯುತವಾಗಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಮಠಗಳಿಗೆ, ಅಭಿವೃದ್ಧಿ ನಿಗಮಗಳಿಗೆ, ಜಾತಿ ಧರ್ಮಗಳಿಗಳಿಗೆ ನೂರಾರು ಕೋಟಿ ಬಿಡುಗಡೆ ಮಾಡಲು ಹಣವಿದೆ. ಆದರೆ ದುಡಿಯುವ ಕೈಗಳಿಗೆ ನೀಡಲು ಹಣವಿಲ್ಲ. ಸಾರಿಗೆ ನೌಕರರು ಕೇಳುವ 6ನೇ ವೇತನ ಆಯೋಗ ಜಾರಿಮಾಡಲು ಆರ್ಥಿಕ ಸಂಕಷ್ಟದ ನೆಪ ಹೇಳುತ್ತಿರುವುದೇಕೆ? ನಮಗಾದ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಬೆದರಿಕೆಯೊಡ್ಡಿ ಕಾರ್ಮಿಕರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ನ್ಯಾಯವೇ? ನಿಮಗೆ ಬೇಕಾದ ನಿಗಮಗಳನ್ನು ಸ್ಥಾಪಿಸಿ 500-600 ಕೋಟಿ ಹಣ ಬಿಡುಗಡೆ ಮಾಡುತ್ತೀರಿ ಬಡ ಕಾರ್ಮಿಕರು ಕೇಳಿದರೆ ಹಣವಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವೇಳೆಯಲ್ಲಿ ಮುಷ್ಕರ; ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡ ಸಾರಿಗೆ ಸಿಬ್ಬಂದಿ
ಖ್ಯಾತ ಸ್ಟಾರ್ ದಂಪತಿಗೆ ಜೈಲುಶಿಕ್ಷೆ