
ಪ್ರಗತಿವಾಹಿನಿ ಸುದ್ದಿ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ವೇಗವಾಗಿ ಬಂದ ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಪಘಾತಕ್ಕೀಡಾದ ಕಾರು ಸಂಪೂರ್ಣ ಜಖಂಗೊಂಡಿದ್ದು ಗುರುತೇ ಸಿಗದಂತಾಗಿದೆ. ಇಲ್ಲಿನ ಅಬು ರಸ್ತೆಯ ಕಿವ್ರಾಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅಪಘಾತ ಉಂಟಾಗಿದೆ ಎಂದು ಮೌಂಟ್ ಅಬು, ಗೋಮಾರಂನ ಸರ್ಕಲ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ನಾರಾಯಣ ಪ್ರಜಾಪತ್, ಅವರ ಪತ್ನಿ ಪೋಷಿ ದೇವಿ, ಮಗ ದುಶ್ಯಂತ್, ಚಾಲಕ ಕಲುರಾಮ್ ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಪತ್ತೆಯಾಗಬೇಕುದೆ. ಮೃತರೆಲ್ಲರೂ ಅಹಮದಾಬಾದ್ ನಿವಾಸಿಗಳು ಎಂಬ ಮಾಹಿತಿ ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ