Latest

ತುಳಜಾ ಭವಾನಿ ದೇವಸ್ಥಾನ ಪ್ರವೇಶ ನಿರ್ಬಂಧ ಮತ್ತು 5 ಸುದ್ದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಕೋವಿಡ್-೧೯ ಕರೋನಾ ವೈರಾಣುವಿನ ಹರಡುವಿಕೆಯ ನಿಯಂತ್ರಣಕ್ಕಾಗಿ ನವರಾತ್ರಿ ಉತ್ಸವಕ್ಕೆ ಶ್ರೀ ತುಳಜಾ ಭವಾನಿ ದೇವಸ್ಥಾನ ತುಳಜಾಪುರ ಮಹಾರಾಷ್ಟ್ರ ದೇವಾಲಯಕ್ಕೆ ಅಕ್ಟೋಬರ್ ೧೭ ರಿಂದ ನವ್ಹೆಂಬರ್ ೧ ರವರೆಗೆ ಸಾರ್ವಜನಿಕ ಭಕ್ತಾಧಿಗಳ ಪ್ರವೇಶವನ್ನು ಉಸ್ಮಾನಾಬಾದ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ತುಳಜಾ ಭವಾನಿ ಮಂದಿರದ ಚೇರಮನ್ ಸಂಸ್ಥಾನ ವತಿಯಿಂದ ನಿರ್ಭಂದಿಸಿರುತ್ತಾರೆ.
ಬೆಳಗಾವಿ ಜಿಲ್ಲೆಯ ಭಕ್ತಾಧಿಗಳು ನವ್ಹೆಂಬರ್ ೧ ರವರೆಗೆ ಮಾಹಾರಾಷ್ಟ್ರದ ತುಳಜಾಪುರ ಶ್ರೀ ತುಳಜಾ ಭವಾನಿ ದೇವಸ್ಥಾನದ ದರ್ಶನಕ್ಕಾಗಿ ಸಾರ್ವಜನಿಕರಿಗೆ ಪ್ರಯಾಣ ಸಬಾರದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುಳೇಬಾವಿ-ಸುಲಧಾಳ ರೈಲ್ವೆ ನಿಲ್ದಾಣಗಳ ಮಧ್ಯದ ಸುಳೇಬಾವಿ ಗ್ರಾಮದ ಹತ್ತಿರ ಅಕ್ಟೋಬರ್ ೧೧ ರಂದು ಅಪರಿಚಿತ ವ್ಯಕ್ತಿ (೫೦) ಚಲಿಸುವ ರೈಲು ಗಾಡಿ ಮುಂದೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಅಕ್ಟೋಬರ್ ೧೨ ರಂದು ಪ್ರಕರಣ ದಾಖಲಿಸಲಾಗಿರುತ್ತದೆ.
ಮೃತನ ಎತ್ತರ ೫ ಪುಟ್ ೫ ಇಂಚು ಗೋಧಿ ಮೈಬಣ್ಣ, ಮೈಯಿಂದ ಸದೃಢ, ತೆಲೆಯಲ್ಲಿ ೪ ಕಪ್ಪು ಬಿಳಿ ಕೂದಲು ಇರುತ್ತವೆ, ಉಡಪುಗಳು ಮೃತನು ತಿಳಿ ನೀಲಿ ಚೌಕಡಿಯುಳ್ಳ ಪುಲ್ ಶರ್ಟ, ಕಡು ನೀಲಿ ಜಾಕೇಟ, ಸಾಧಗಪ್ಪು ಪ್ಯಾಂಟ, ಚಾಕಲೇಟ ಕಲರ್ ಅಂಡರವೇರ್ ಧರಿಸಿರುತ್ತಾನೆ ಮತ್ತು ನೀಲಿ ಚಿಲ ಮತ್ತು ಡಿಜೈನ ಇರುವ ಕೆಂಪು ಚತ್ರಿ ಇರುತ್ತದೆ.
ಈ ಚಹರೆಯುಳ್ಳ ವ್ಯಕ್ತಿಯ ಸಂಭಂದಿಕರು ಇದ್ದಲ್ಲಿ ಕೂಡಲೇ ಪೊಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ಇವರನ್ನು ಸಂಪರ್ಕಿಸಬೇಕು, ಪೊಲೀಸ್ ಠಾಣೆ ದೂರವಾಣ ಸಂಖ್ಯೆ ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ ೯೪೮೦೮೦೨೧೨೭  ನ್ನು ಸಂಪರ್ಕಿಸಲು ರೈಲ್ವೆ ಪೋಲಿಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಕಾರರ ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ

ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ವಿದ್ಯುತ್ ಮಗ್ಗ ನೇಕಾರರು ಸಹ ಸಂಕಷ್ಟದಲ್ಲಿರುವುದರಿಂದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ರೂ.೨,೦೦೦ ಗಳ ಪರಿಹಾರಧನವನ್ನು ನೇರವಾಗಿ ಕಾರ್ಮಿಕರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬಾಕಿ ಇರುವ ನೇಕಾರರು/ಮಾಲೀಕರು ಅಕ್ಟೋಬರ್ ೨೪ರ ಒಳಗಾಗಿ ಈ ಕಚೇರಿಗೆ ನೇರವಾಗಿ ಸಂಪರ್ಕಿಸಿ ಸಲ್ಲಿಸಬಹುದು. ಅಕ್ಟೋಬರ್ ೨೪ ಕೊನಯ ದಿನವಾಗಿದ್ದು ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವಿಕರಿಸಲಾಗುವುದಿಲ್ಲ. ಇದು ಅಂತಿಮ ಪ್ರಕಟಣೆಯಾಗಿರುತ್ತದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ನೇಕಾರರು ಹಾಗೂ ಇನ್ನು ಮುಂದೆ ಅರ್ಜಿ ಸಲ್ಲಿಸುವ ನೇಕಾರರು ತಮ್ಮ ಆಧಾರ ಸಂಖ್ಯೆ ತಮ್ಮ ಬ್ಯಾಂಕಿನ ಖಾತೆಗಳಿಗೆ ಲಿಂಕ್ ಆಗಿರುವುದನ್ನು ಹಾಗೂ ಖಾತೆ ಚಾಲ್ತಿಯಲ್ಲಿರುವುದನ್ನು ಕೂಡಲೇ ಖಾತ್ರಿಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣ ಸಂಖ್ಯೆ: ೦೮೩೧-೨೯೫೦೬೭೪ ಗೆ ಸಂಪರ್ಕಿಸಬಹುದೆಂದು
ಉಪ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ದಿನದಯಾಳ್ ಅಂತ್ಯೋದಯ ಯೋಜನೆ: ಅರ್ಜಿ ಆಹ್ವಾನ

ಯುವಕ-ಯುವತಿಯರಿಗಾಗಿ ೨೦೧೯-೨೦ನೇ ಸಾಲಿನಲ್ಲಿ ದಿನದಯಾಳ್ ಅಂತ್ಯೋದಯ ಯೋಜನೆಯಡಿ ಕೌಶಲ್ಯ ತರಬೇತಿಯ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ತರಬೇತಿ ನೀಡಲು ಅಭಿಯಾನ ನಿರ್ದೇಶಕರು ಇವರ ನಿರ್ದೇಶನದಂತೆ Seಟಜಿ ಇmಠಿಟoಥಿeಜ ಖಿಚಿiಟoಡಿ ಹಾಗೂ ಆomesಣiಛಿ ಆಚಿಣಚಿ ಇಟಿಣಡಿಥಿ ಔಠಿeಡಿಚಿಣoಡಿ ತರಬೇತಿಯನ್ನು ನೀಡಲು ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
ತರಬೇತಿಗಳನ್ನು ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅಕ್ಟೋಬರ್ ೩೧ ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದು ನಿಪ್ಪಾಣ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೋಲಿಸ್ ಮೀಸಲು ಪಡೆಯ ೪೯ನೇ ಸ್ಥಾಪನಾ ದಿನ

ಮಚ್ಚೆ ಬೆಳಗಾವಿಯಲ್ಲಿನ ಕರ್ನಾಟಕ ರಾಜ್ಯ ೨ನೇ ಪೋಲಿಸ್ ಮೀಸಲು ಪಡೆಯ ಘಟಕ ಕಾರ್ಯಾರಂಭ ಮಾಡಿ ೫೦ ವರ್ಷದ ಸುವರ್ಣ ಸಂಭ್ರಮದ ಅಂಚಿನಲ್ಲಿರುವದರಿಂದ ಅಕ್ಟೋಬರ್ ೧೪ ರಂದು ೪:೩೦ ಗಂಟೆಗೆ ಪಡೆಯ ೪೯ ನೇ ಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಆಕರ್ಷಕ ಕವಾಯತು, ಮಿನಿಟ್ ಡ್ರೀಲ್, ಕಂಪನಿ ಡ್ರೀಲ್ ಹಾಗೂ ಇನ್ನಿತರೆ ಕೌಶಲ್ಯವೃದ್ಧಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಉತ್ತರ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬೆಳಗಾವಿ ಇವರು ಮುಖ್ಯ ಅತಿಥಿಗಳಾಗಿ ಹಾಗೂ ೨ನೇ ಪಡೆಯ ಕಮಾಂಡೆಂಟ್ ಕೆಎಸ್.ಆರ್.ಪಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಚ್ಚೆ-ಬೆಳಗಾವಿ ಘಟಕದ ಅಧಿಕಾರಿ, ಸಿಬ್ಬಂದಿಯವರು ಉಪಸ್ಥಿತರಿರುತ್ತಾರೆ ಎಂದು ೨ ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಸವದತ್ತಿ ಯಲ್ಲಮ್ಮಾ ಪುರಸಭೆಯ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ೨೦೧೯-೨೦ನೇ ಸಾಲಿನಲ್ಲಿ ದಿನದಯಾಳ್ ಅಂತ್ಯೋದಯ ಯೋಜನೆಯಡಿ ಕೌಶಲ್ಯ ತರಬೇತಿಯ ಮೂಲಕ ಉಧ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ತರಬೇತಿ ನೀಡಲು ಅಭಿಯಾನ ನಿರ್ದೇಶಕರು ಇವರ ನಿರ್ದೇಶನದಂತೆ Seಟಜಿ ಇmಠಿಟoಥಿeಜ ಖಿಚಿiಟoಡಿ ತರಬೇತಿಯನ್ನು ನೀಡಲು ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
ತರಬೇತಿಗಳನ್ನು ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ನವ್ಹೆಂಬರ್ ೨೭ ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ಎಸ್.ವೈ ಹಾದಿಮನಿ ಸಿ.ಎ.ಓ ಯಲ್ಲಮ್ಮಾ ಪುರಸಭೆ ಸವದತ್ತಿ ಇವರನ್ನು ಸಂಪರ್ಕಿಸಬಹುದು ಎಂದು  ಪಿ. ಎಂ. ಚನ್ನಪ್ಪನವರ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button