Latest

ಬಿಜೆಪಿಯವರಿಗೆ ತಲೆ ಕೆಟ್ಟಿದೆ, ಚೆಕ್ ಮಾಡಿಸಲಿ: ಕೋನರೆಡ್ಡಿ

ಪ್ರಗತಿವಾಹಿನಿ ಸುದ್ದಿ, ಶಿರಸಿ

ಶಿರಸಿಯಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಯಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಕೋನರೆಡ್ಡಿ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

Home add -Advt

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದ ಜಂಟಿ ಸಭೆಯಲ್ಲಿ ಪಾಲ್ಗೊಂಡ ಅವರು ಬಿಜೆಪಿ ಕೆಲ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲದೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ನಿಮಾನ್ಸ್ ಗೆ ಸೇರಿಸಬೇಕು ಎಂದು ಹೇಳಿದರು.

ಬಿಜೆಪಿಯವರು ಅರೆಹುಚ್ಚರು ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ಅನಂತ ಕುಮಾರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಕಳೆದ 6 ತಿಂಗಳು ಕ್ಯಾನ್ವಾಸ್ ಮಾಡಿದ್ರೂ ಅವರಿಗೆ ಮೋಸ ಆಗಿಲ್ವಾ ? ಬಿಜೆಪಿಯವರು ಏನ್ ಮಾಡ್ತಾರೆ ಅಂತ ಅವರಿಗೇ ತಿಳಿದಿಲ್ಲ. ಸುರೇಶ್ ಗೌಡ, ಆರ್. ಅಶೋಕ್, ಈಶ್ವರಪ್ಪ ಒಂದೊಂದು ಹೇಳಿಕೆ ನೀಡ್ತಿದಾರೆ. ಅವರೆಲ್ಲರೂ ಮೆಂಟಲ್ ಆಸ್ಪತ್ರೆಲಿ ಚಿಕಿತ್ಸೆ ಪಡೆಯಲಿ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಹವಾ ಇದೆ. ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಗೆದ್ದೆ ಗೆಲ್ತಾರೆ. ದೇವೆಗೌಡರಿಗಾಗಿ ಅಲ್ಲಿಯ ಜನ ಏನುಬೇಕಾದರೂ ಮಾಡ್ತಾರೆ. ಉತ್ತರ ಕನ್ನಡ ಕ್ಷೇತ್ರದಲ್ಲೂ ಸಂಘಟಿತ ಪ್ರಯತ್ನ ಮಾಡಿದ್ರೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Back to top button