Belagavi NewsBelgaum NewsKannada NewsKarnataka News

*ಮಾರಕಾಸ್ತ್ರಗಳಿಂದ ಹೊಡೆದಾಡೆಕೊಂಡು ಮೃತಪಟ್ಟ ಇಬ್ಬರು ಯುವಕರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ಇಬ್ಬರು ಹೊಡೆದಾಡಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.‌

ಒಂದೆ ಗ್ರಾಮದ ಇಬ್ಬರು ವ್ಯಕ್ತಿಗಳು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡೆಕೊಂಡಿದ್ದಾರೆ. ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಹಣಮಂತ ರಾಮಚಂದ್ರ ಖೋತ ( 34) ಮತ್ತು ಖಂಡೂಬಾ ತಾನಾಜಿ ಖೋತ ( 32) ಇವರು ಮೃತಪಟ್ಟಿದ್ದಾರೆ. 

Home add -Advt

ಜಮೀನಿಗೆ ಸಂಭಂಧಿಸಿದಂತೆ ಇಬ್ಬರ ನಡುವೆ ಹಲವಾರು ದಿನಗಳಿಂದ ವಿವಾದ ನಡೆದಿತ್ತು, ಗ್ರಾಮದ ಹಿರಿಯರೂ ರಾಜಿ ಪಂಚಾಯತಿ ಮಾಡಿಸಿ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದ್ದಾರೆ.‌ ಆದರೂ ಸಹ ನಿನ್ನೆ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡೆಕೊಂಡು ಇಬ್ಬರೂ ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದ್ರೆ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ಈ ಘಟನೆ ಅಥಣಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Related Articles

Back to top button