Latest

ಪತಿಯ ಫೋನ್ ಪರಿಶೀಲಿಸಿದ ಪತ್ನಿ; 1 ಲಕ್ಷ ದಂಡ ವಿಧಿಸಿದ ಕೋರ್ಟ್

ಪ್ರಗತಿವಾಹಿನಿ ಸುದ್ದಿ; ದುಬೈ: ಪತಿಯ ಫೋನ್ ಪರಿಶೀಲನೆ ನಡೆಸಿದ ಪತ್ನಿಗೆ ನ್ಯಾಯಾಲಯವೊಂದು ಬಿಗ್ ಶಾಕ್ ನೀಡಿದೆ. ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ದುಬೈನಲ್ಲಿ ನಡೆದಿದೆ.

ಪತಿ ಮೇಲೆ ಅನುಮಾನಪಟ್ಟ ಪತ್ನಿ, ಪತಿಯ ಮೊಬೈಲ್ ಫೋನ್ ನಲ್ಲಿದ್ದ ಫೋಟೋ, ರೆಕಾರ್ಡಿಂಗ್ ಗಳನ್ನು ಪರಿಶೀಲಿಸಿ, ಅದನ್ನು ತನ್ನ ಕುಟುಂಬದವರಿಗೆ ಕಳುಹಿಸಿದ್ದಾಳೆ. ವಿಷಯ ತಿಳಿದ ಪತಿ ಮಹಾಶಯ ಪತ್ನಿ ತನಗೆ ಅವಮಾನ ಮಾಡಿದ್ದಾಳೆ. ತನ್ನ ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾನೆ.

Home add -Advt

ಅರ್ಜಿ ವಿಚಾರಣೆ ನಡೆಸಿದ ದುಬೈನ ರಾಸ್ ಅಲ್ ಖೈಮಾದಲ್ಲಿನ ಸಿವಿಲ್ ನ್ಯಾಯಾಲಯ ಪತ್ನಿಗೆ 1 ಲಕ್ಷ ದಂಡ ವಿಧಿಸಿದೆ. ಪತ್ನಿಗೆ ಯಾವುದೇ ಕೆಲಸವಾಗಲಿ, ಸಂಬಳವಾಗಲಿ ಇಲ್ಲದ ಕಾರಣ ಆಕೆ ಪರ ವಕೀಲರೇ ಈ ದಂಡದ ಮೊತ್ತ ಪಾವಿತಿಸಿರುವ ಘಟನೆ ನಡೆದಿದೆ.
ಜಿಂದಾಲ್ ಗೆ ಭೂಮಿ ಪರಭಾರೆ ರದ್ದು

Related Articles

Back to top button