ಪ್ರಗತಿವಾಹಿನಿ ಸುದ್ದಿ, ಕಾರವಾರ – ಜಿಲ್ಲೆಯಲ್ಲಿ ಕಳೆದ ಬಾರಿ ಜಾರಿಗೊಳಿಸಿದ
ಲಾಕ್ ಡೌನ್ ನಿಯಮಗಳನ್ನು ಬದಲಿಸಿ ಸಡಿಲಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ ಬಾರಿಯ ಲಾಕ್ ಡೌನ್ ನಿಯಮಗಳನ್ನು ಸ್ವಲ್ಪ ಬದಲಿಸಿ ಜಿಲ್ಲೆಯ ಜನತೆಯ ಅಗತ್ಯೆತೆಗೆ ಅನುಗುಣವಾಗಿ ಶುಕ್ರವಾರದಿಂದ ಭಾನುವಾರದ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಸೋಮವಾರದಿಂದ ಗುರುವಾರದ ವರೆಗೆ ಬೆಳಿಗ್ಗೆ 8 ರಿಂದ 12 ರ ವರೆಗೆ ದಿನಸಿ, ಹಾಲು, ತರಕಾರಿ, ಮೆಡಿಕಲ್, ಕೃಷಿಗೆ ಸಂಬಂಧಿಸಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ತುರ್ತು ಸೇವೆಗಳನ್ನ ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ ಹಾಗೂ ಲಾಕ್ ಡೌನ್ ಸಡಿಲಿಕೆಯ ನಿಯಮಗಳು ಕಂಟೈನ್ಮೆಂಟ್ ಜೋನ್ ಹಾಗೂ ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳಿಗೆ ಅನ್ವಯಿಸುವುದಿಲ್ಲ ಎಂದರು.
ಪೊಲೀಸ್ ವರಿಷ್ಟಧಿಕಾರಿ ಶಿವಪ್ರಕಾಶ್ ದೇವರಾಜ್ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ-19 ಹರಡುವಿಕೆ ಕಳೆದಬಾರಿಗಿಂತಲೂ ಅಧಿಕ ಹಾಗೂ ವೇಗವಾಗಿದೆ, ಅದನ್ನ ಎದುರಿಸುವಲ್ಲಿ ಜಿಲ್ಲಾಡಳಿತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಅವಶ್ಯಕತೆ ಇರುವುದರಿಂದ ತೊಂದರೆ ಉಂಟಾಗದ ರೀತಿಯಲ್ಲಿ ಲಾಕ್ ಡೌನ್ ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಲಾಗುತ್ತಿದೆ.
ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಮೈದಾನದಮೇಲೆ ನಿಗಾ ಇರಿಸಿ ಡ್ರೋನ್ ಮುಖಾಂತರ ಕಾರ್ಯಾಚರಣೆ ನಡೆಸಿ ಗುಂಪಿನಲ್ಲಿ ಕ್ರಿಕೆಟ್ ನಂತಹ ವಿವಿಧ ಆಟ ಆಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದರು.
ಸಿ ಇ ಓ ಪ್ರಿಯಾಂಗಾ ಎಂ. ಮಾತನಾಡಿ ಜಿಲ್ಲೆಯಲ್ಲಿ ಕಿಮ್ಸ್ ನ ವಿದ್ಯಾರ್ಥಿಗಳನ್ನ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸೇರಿಸಿಕೊಂಡು RAT ಕಿಟ್ ನೊಂದಿಗೆ ಮನೆಮನೆಗೆ ತೆರಳಿ ಪಾಸಿಟಿವ್ ಪ್ರಕಾರಣಗಳನ್ನ ಪತ್ತೆಹಚ್ಚುವ ಮೊಬೈಲ್ ಟೀಮ್ ರಚಿಸಲಾಗಿದೆ ಪ್ರಸ್ತುತ ಪ್ರತಿ ತಾಲೂಕಿಗೆ ಒಂದು ತಂಡವಿದ್ದು ತಾಲೂಕಿಗೆ 3 ತಂಡ ರಚಿಸುವ ಉದ್ದೇಶವಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ