Latest

ದೇವಸ್ಥಾನಗಳಿಗೆ ಬರೋಬ್ಬರಿ 5 ಲಕ್ಷ ರೂ.ದೇಣಿಗೆ ನೀಡಿದ ಭಿಕ್ಷುಕಿ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬರು ವಿವಿಧ ದೇವಸ್ಥಾನಗಳಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಿ ಅನ್ನ ಸಂತರ್ಪಣೆಗೆ ಉಪಯೋಗಿಸಿಕೊಳ್ಳುವಂತೆ ಹೇಳಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ತನ್ನ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಅಶ್ವತ್ಥಮ್ಮ ಎಂಬ ವೃದ್ಧೆ, ಅಯ್ಯಪ್ಪಸ್ವಾಮಿ ವೃತಾಧಾರಿಯಾಗಿದ್ದು, ಸಾಲಿಗ್ರಾಮದ ಗುರುನರಸಿಂಹ ಸ್ವಾಮಿ ದೇವಸ್ಥಾನಕ್ಕೆ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಈ ವೃದ್ಧೆ ಅದೇ ದೇವಸ್ಥಾನದ ಮುಂದೆ ಕಳೆದ 25 ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದು, ಈಗ ಅದೇ ದೇವಾಲಯಕ್ಕೆ ದೇಣಿಗೆ ನೀಡಿದ್ದಾರೆ.

ಅಶ್ವತ್ಥಮ್ಮ ದೇವಸ್ಥಾನಗಳ ಆವರಣಗಳಲ್ಲಿ, ಟೋಲ್ಗೇಟ್ ಬಳಿ ಜನರಿಂದ ಹಣ ಸಗ್ರಹಿಸಿ ಕರಾವಳಿಯ ಹಲವು ದೇವಾಲಯಗಳಿಗೆ ಬರೋಬ್ಬರಿ 5 ಲಕ್ಷ ರೂ ವರೆಗೆ ದೇಣಿಗೆ ನೀಡಿದ್ದಾರೆ. ಪತಿ ಹಾಗೂ ಮಗನ ಮರಣದ ನಂತರ ಹೊಟ್ಟೆಪಾಡಿಗಾಗಿ ಅಶ್ವತ್ಥಮ್ಮ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಲು ಆರಂಭಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button