ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಷ್ಯಾ ಇಂದು ಕೂಡ ಮೂರು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ.
ನಾಗರಿಕರ ಸುರಕ್ಷತೆಗಾಗಿ ಮಾರಿಯುಪೋಲ್, ವೊಲ್ನೊವಾಖಾ, ಲುಹಾನ್ಸ್ ಕಿ ಮೂರು ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಯಿಂದ ಕದನ ವಿರಾಮ ಘೋಷಣೆಯಾಗಿದ್ದು, ಕೇವಲ ಎರಡು ಗಂಟೆಗಳು ಮಾತ್ರ ಕದನ ವಿರಾಮವಿರಲಿದೆ.
ಯುದ್ಧ ಪ್ರದೇಶದ ನಗರಗಳಲ್ಲಿರುವ ನಾಗರಿಕರ ಸುರಕ್ಷತೆ, ಸ್ಥಳಾಂತರಕ್ಕಾಗಿ ಹ್ಯೂಮನ್ ಕಾರಿಡಾರ್ ಗೆ ಅವಕಾಶ ಮಾಡಿಕೊಡಬೇಕು ಎಂದು ಉಕ್ರೇನ್ ರಷ್ಯಾಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಉಕ್ರೇನ್ ನ ಎರಡು ನಗರಗಳಲ್ಲಿ 5 ಗಂಟೆಗಳ ಕಾಲ ಕದನ ವಿರಾಮ ಘೋಷಿಸಿತ್ತು. ಇದೀಗ ಮತ್ತೆ ಮೂರು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ.
ಖಾರ್ಕೀವ್ ತೊರೆದ ಭಾರತೀಯರು; ಸಿಎಂ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ