Kannada NewsLatest

ಗೆಳೆಯನ ಪತ್ನಿಗಾಗಿ ಸ್ನೇಹಿತನನ್ನೆ ಕೊಂದು ಸುಟ್ಟುಹಾಕಿದ ಪಾಪಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ನೇಹಿತನ ಪತ್ನಿಗಾಗಿ ಗೆಳೆಯನನ್ನೇ ಬರರವಾಗಿ ಹತ್ಯೆಗೈದು ಬಣವೆಯಲ್ಲಿ ಸುಟ್ಟು ಹಾಕಿರುವ ಘೋರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಸಂತೋಷ್ ಫರೀಟ್(36) ಕೊಲೆಯಾದ ವ್ಯಕ್ತಿ. ಮಹಾರಾಷ್ಟ್ರದ ಕೊಲ್ಲಾಪುರದ ಚಂದಗಡ ನಿವಾಸಿ ಸಂತೋಷ್ ಫರೀಟ್ ಪತ್ನಿ ಜತೆ ಆತನ ಸ್ನೇಹಿತ ಬೆಳಗಾವಿಯ ಕಣಬರಗಿ ನಿವಾಸಿ ಪರಶುರಾಮ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಲ್ಲದೇ ಪರಶುರಾಮ ಸ್ನೇಹಿತನ ಪತ್ನಿಯನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

Home add -Advt

ಕಣಬರಗಿಗೆ ಬಂದ ಸಂತೋಷ್ ನನ್ನು ಪುಸಲಾಯಿಸಿ ಕರೆದೊಯ್ದು ಮಧ್ಯಪಾನ ಮಾಡಿಸಿದ ಪರಶುರಾಮ, ಮಾಲಿನಿ ನಗರ ಬಳಿ ಗದ್ದೆಗೆ ಕರೆತಂದಿದ್ದಾನೆ. ಅಲ್ಲಿ ಟವಲ್ ನಿಂದಲೇ ಸಂತೋಷ್ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಭತ್ತದ ಬಣವೆಯಲ್ಲಿ ಶವವಿಟ್ಟು ಬೆಂಕಿ ಹಚ್ಚಿದ್ದಾನೆ. ಕೃತ್ಯದ ಬಳಿಕ ಸಂತೋಷ್ ಬೈಕ್ ನಲ್ಲಿ ತೆರಳಿದ್ದಾನೆ. ಈ ದೂಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಠಾಣೆ ಪೊಲೀಸರು ಇದೀಗ ಆರೋಪಿ ಪರಸುರಾಮನನ್ನು ಬಂಧಿಸಿದ್ದಾರೆ.

ಮತ್ತೆ 3 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

Related Articles

Back to top button