ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ಸಾರಿರುವ ಭೀಕರ ಯುದ್ಧ 5ನೇ ದಿನವೂ ಮುಂದುವರೆದಿದೆ. ಮಾತುಕತೆಗೆ ಉಕ್ರೇನ್ ಸಿದ್ಧವಿರುವುದಾಗಿ ಒಪ್ಪಿದರೂ ರಷ್ಯಾ ತನ್ನ ಆಕ್ರಮಣಕಾರಿ ದಾಳಿ ಮುಂದುವರಿಸಿದೆ.
ಈ ನಡುವೆ ರಷ್ಯಾ ವಿರುದ್ಧ ಉಕ್ರೇನ್ ಮಾಡೆಲ್ ಒಬ್ಬರು ಸಿಡಿದೆದ್ದಿದ್ದು, ಶತ್ರು ಸೇನೆ ವಿರುದ್ಧ ಹೋರಾಡಲು ಗನ್ ಹಿಡಿದು ನಿಂತಿದ್ದಾರೆ.
ಮಾಡೆಲ್, ಮಾಜಿ ಮಿಸ್ ಗ್ರ್ಯಾಂಡ್ ಆಫ್ ಉಕ್ರೇನ್ ಆನಸ್ತಾಸಿಯಾ ಲೆನ್ನಾ, ಉಕ್ರೇನ್ ಸೇರಿದ್ದು, ದೇಶಕ್ಕಾಗಿ ಹೋರಾಡಲು ಸಜ್ಜಾಗಿದ್ದಾರೆ. ಇನ್ ಸ್ಟಾಗ್ರಾಂ ನಲ್ಲಿ ಗನ್ ಹಿಡಿದು ನಿಂತಿರುವ ಆನಸ್ತಾಸಿಯಾ ಫೋಟೋಗಳು ಭಾರಿ ವೈರಲ್ ಆಗಿದ್ದು, ರಷ್ಯಾ ಸೇನೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಗುಡುಗಿದ್ದಾರೆ.
ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ನ ನಾಗರಿಕರು ಕೂಡ ಮುಂದಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಿಡಿದು ರಷ್ಯಾ ಸೇನೆ ಹಿಮ್ಮೆಟ್ಟಿಸಲು ಯತ್ನಿಸಿದ್ದಾರೆ.
ರಷ್ಯಾ ಜೊತೆ ಬೇಷರತ್ ಸಂಧಾನ ಮಾತುಕತೆಗೆ ಒಪ್ಪಿದ ಉಕ್ರೇನ್; ಭೀಕರ ಯುದ್ಧ ಕೊನೆಗೊಳ್ಳುವ ನಿರೀಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ