Latest

*ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಸಾರಿದ ವಿ.ಸೋಮಣ್ಣ; ವರುಣಾದಲ್ಲಿ ಗನ್ ಹಿಡಿದು ನಿಂತಿದ್ದೇನೆ ಎಂದ ಸಚಿವರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವರುನಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿರುವ ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾದುತ್ತಿದ್ದೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ವರುಣಾ ಹಾಗೂ ಚಾಮರಾಜನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲು ನನ್ನನ್ನು ಕಳುಹಿಸಿದ್ದರೆ. ತಾಯಿ ಚಾಮುಂಡೇಶ್ವರಿ, ಮಲೈಮಾದಪ್ಪ ದಂಡ ನಾಯಕರು ಅವರು ಏನು ದಾರಿ ತೋರಿಸುತ್ತಾರೋ ಹಾಗೆ ಆಗುತ್ತೆ ಎಂದು ಹೇಳಿದರು.

Home add -Advt

ವರುಣಾ ಕ್ಷೇತ್ರದಲ್ಲಿ ನಾನು ಗನ್ ಹಿಡಿದು ನಿಂತಿದ್ದೇನೆ. ಗನ್ ಹೊಡೆಸೋದು ಚಾಮುಂಡಿ ಹಾಗೂ ಮಲೈ ಮಹದೇಶ್ವರ. ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವರುಣಾದ ಜನರು ಮನೆ ಮಗನಂತೆ ಕಾಣುತ್ತಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುವುದು ಗ್ಯಾರಂಟಿ. ಕ್ಷೇತ್ರದ ಜನರು ಬಹಳ ಪ್ರೀತಿ, ವಿಶ್ವಾದಿಂದ ಕಾಣುತ್ತಿದ್ದಾರೆ ಎಂದರು.

https://pragati.taskdun.com/h-d-kumaraswamyreactionsiddaramaiahstatementmysore/


Related Articles

Back to top button