LatestUncategorized

*ಈಜಲು ನಾಲೆಗೆ ಇಳಿದಿದ್ದ ಐವರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಜಲು ವಿಸಿ ನಾಲೆಯಲ್ಲಿ ಇಳಿದಿದ್ದ ಐವರು ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.

Home add -Advt

ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಮೃತರು. ಮೂವರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮೃತ ಐವರು ಬೆಂಗಳೂರಿನ ನೀಲಸಂದ್ರದವರಾಗಿದ್ದು, ಅಜ್ಜಿಯ ಮನೆಗೆಂದು ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ.

https://pragati.taskdun.com/v-somannasurgicalstrikevarunachamarajanagara/


Related Articles

Back to top button