Latest

ಕೊರೋನಾ: 2 ಮಹತ್ವದ ಘೋಷಣೆ ಮಾಡಿ ಪ್ರಧಾನಿ ಮೋದಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶದಲ್ಲಿ ಜನೆವರಿ 3ರಿಂದ ಮಕ್ಕಳಿಗೂ ಕೊರೋನಾ ವ್ಯಾಕ್ಸಿನೇಶನ್ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಇದೀಗ ಮಾತನಾಡಿದ ಮೋದಿ, 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಶನ್ ನೀಡಲಾಗುವುದು ಎಂದರು.

ಶಾಲೆ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನೇಶನ್ ನೀಡಲಾಗುವುದು ಎಂದೂ ಅವರು ಹೇಳಿದರು.

ಜೊತೆಗೆ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ 3ನೇ ಡೋಸ್ (ಪ್ರಿಕಾಶನ್ ಡೋಸ್) ವ್ಯಾಕ್ಸಿನೇಶನ್ ನ್ನು ಜನೆವರಿ 10ರಿಂದ ನೀಡಲಾಗುವುದು ಎಂದೂ ಅವರು ಹೇಳಿದರು.

Home add -Advt

ಒಮಿಕ್ರಾನ್ ಹರಡುವ ಆತಂಕದ ಸಂದರ್ಭದಲ್ಲಿ ಮತ್ತು 3ನೇ ಅಲೆಯ ಸುದ್ದಿ ಇನ್ನೂ ಜೀವಂತವಾಗಿರುವ ಸಂದರ್ಭದಲ್ಲಿ ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ದೇಶದಲ್ಲಿ ವ್ಯಾಕ್ಸಿನೇಶನ್ ಅಭಿಯಾನ ಯಶಸ್ವಿಯಾಗಿರುವುದಕ್ಕೆ ಮೋದಿ ಜನತಗೆ ಧನ್ಯವಾದ ಸಲ್ಲಿಸಿದರು.

 8 -9ನೇ ತರಗತಿ ವಿದ್ಯಾರ್ಥಿಗಳಿಗೂ ರೈತ ವಿದ್ಯಾನಿಧಿ ವಿಸ್ತರಣೆ; ವಿಜಯಪುರಕ್ಕೆ ಹಲವು ಯೋಜನೆ; ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ; ಮನದಾಳದ ಯೋಜನೆಗಳನ್ನು ತೆರೆದಿಟ್ಟ ಬೊಮ್ಮಾಯಿ; ಯತ್ನಾಳ್ ಹಾಡಿ ಹೊಗಳಿದ ಸಿಎಂ

 

Related Articles

Back to top button