Latest

ಎಸ್ ಐಟಿ ಮುಂದೆ ಹಾಜರಾದ ಯುವತಿ ಪೋಷಕರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಸಿಡಿ ಯುವತಿಯ ಪೋಷಕರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಇಂದು ಬೆಳಿಗ್ಗೆ ಹೊಸ ವಿಡಿಯೋ ಬಿಡುಗಡೆ ಮಾಡಿದ್ದ ಸಿಡಿ ಲೇಡಿ, ತನ್ನ ತಂದೆ-ತಾಯಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ. ಅವರು ಎಲ್ಲಿದ್ದಾರೆ ಎಂಬುದೂ ನನಗೆ ತಿಳಿಯುತ್ತಿಲ್ಲ. ಅವರನ್ನು ಬೆಂಗಳೂರಿಗೆ ಕರೆತಂದು ನನ್ನ ಅಪ್ಪ-ಅಮ್ಮ, ಅಜ್ಜಿ ಹಾಗೂ ಸಹೋದರರಿಗೆ ಎಸ್ ಐಟಿ ರಕ್ಷಣೆ ನಿಡಬೇಕು. ನಾನು ಅವರ ಮುಂದೆಯೇ ಹೇಳಿಕೆ ನೀಡುವುದಾಗಿ ತಿಳಿಸಿದ್ದಳು.

Home add -Advt

ಇದರ ಬೆನ್ನಲ್ಲೇ ಇದೀಗ ಯುವತಿ ಪೋಷಕರು ಆಡುಗೋಡಿ ಎಸ್ ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾಗಿದ್ದಾರೆ. ಎಸ್ ಐಟಿ ವಿಚಾರಣೆ ಬಳಿಕ ಪೋಷಕರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಕ್ಕೆ ಸಿಡಿ ಲೇಡಿ ಸ್ಪಷ್ಟನೆ

Related Articles

Back to top button