*ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರು ಮೆಚ್ಚಿ ಮಾತನಾಡಿರುವುದರಲ್ಲಿ ಸಂಪೂರ್ಣ ಸತ್ಯವಿದೆ: ಸಿಎಂ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರು ಮೆಚ್ಚಿ ಮಾತನಾಡಿರುವುದರಲ್ಲಿ ಸಂಪೂರ್ಣ ಸತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಐತೀರ್ಪು ಬಂದು 13 ವರ್ಷಗಳಾಗಿದೆ, ಆದರೆ ಕೇಂದ್ರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ.
7 ಸಾವಿರ ಕೋಟಿ ಬೆಲೆ ಏರಿಕೆ ಆಗಿರುವುದು ನಿಜ, ಆದರೆ ಬಿಜೆಪಿಯವರು 40 ಸಾವಿರ ಕೋಟಿ ತೆರಿಗೆ ಹೆಚ್ಚಿಸಿದ್ದಾರೆ ಎನ್ನುತ್ತಿರುವುದು ಪರಮ ಸುಳ್ಳು.
Revenue expenditure ಹೆಚ್ಚಾಗುವಾಗ ಆದಾಯ ಬರಬೇಕಲ್ಲ. ತೆರಿಗೆ ಹೆಚ್ಚಿಸುವುದು ಒಂದು ನಿರಂತರ ಪ್ರಕ್ರಿಯೆ.
ರಾಜ್ಯಪಾಲರ ಬಾಷಣದಲ್ಲಿ ವಾಸ್ತವಾಂಶಗಳನ್ನು ಹೇಳಲಾಗಿದೆ. ಸತ್ಯಗಳನ್ನು ಹೇಳಲು ಪ್ರಯತ್ನಿಸಿದ್ದು, ನಮ್ಮ ಮುಂದಿನ ಗುರಿಯ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ಅವಾಸ್ತವಿಕವಾದ ವಿಚಾರಗಳನ್ನು ಹೇಳಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ವಂದಾ ನಿರ್ಣಯವನ್ನು ದಯಮಾಡಿ ಒಕ್ಕೊರಿನಿಂದ ಅಂಗೀಕಾರ ಮಾಡಲು ಸದಸ್ಯರನ್ನು ಮುಖ್ಯಮಂತ್ರಿಗಳು ಕೋರಿದರು.
ದಲಿತರ ಪ್ರಗತಿಗೆ SCP/TSP ಕಾಯ್ದೆ ತಂದಿದ್ದು ಯಾರು ಎಂದು ಪ್ರಶ್ನಿಸಿದ ಸಿಎಂ: ನೀವೇ ತಂದಿದ್ದು ಎಂದ ಬಿಜೆಪಿ ಸದಸ್ಯರು
ಹಿಂದಿನ ಸರ್ಕಾರದ ಅವಧಿಯಲ್ಲಿ 2,70000 ಕೋಟಿ ರೂ. ಹೆಚ್ಚು ಅನುದಾನ ಇಲ್ಲದೆಯೇ ಮಂಜೂರಾತಿ ನೀಡಲಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಸೃಷ್ಟಿಯಾಯಿತು.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರದಡಿ 1,66,000 ಕೋಟಿ ಗಳನ್ನು ಮಂಜೂರು ಮಾಡಿದರು. ಹಣವಿಲ್ಲದೇ ಮಂಜೂರು ಮಾಡಿದ್ದ ಕಾರಣ, ಬಾಕಿ ಬಿಲ್ಲುಗಳು ಹೆಚ್ಚು ಉಳಿದವು.
ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿರಲು Fiscal responsibility Act ದಂತೆ ಇರುವ ಮಾನದಂಡಗಳನ್ನು ಪೂರೈಸಿರಬೇಕು. ನಾವು ಪೂರೈಸಿದ್ದೇವೆ.
ಆರ್ಥಿಕ ಹೊಣಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಯ ಶೇ.25 ರಷ್ಟಿರಬೇಕು, ರಾಜ್ಯ ಶೇ.24.91 ರಷ್ಟರ ಮಿತಿಯಲ್ಲಿದೆ.
ವಿತ್ತೀಯ ಕೊರತೆಯನ್ನು GSDPಯ ಶೇ.3 ರಷ್ಟುನ್ನು ಮೀರಬಾರದು. 2.95 % ರಷ್ಟಿದೆ.
ಇದರಲ್ಲಿ ಸರ್ಕಾರ ಎಲ್ಲ ಮಾನದಂಡಗಳ ಮಿತಿಯೊಳಗಿದೆ. ಆದ್ದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಜನರಿಗೂ ಇದರ ಬಗ್ಗೆ ಅರಿವಿದೆ.
ಸಂವಿಧಾನದ ಆರ್ಟಿಕಲ್ 46 ರಂತೆ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದೆ. ಮೊದಲು ಆಂದ್ರಪ್ರದೇಶ, ನಂತರ ಕರ್ನಾಟಕ SCSP –TSP ಕಾಯ್ದೆ ಜಾರಿಗೆ ತಂದಿತು. ಈಗ ತೆಲಂಗಾಣ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇನ್ನುಳಿದ ಯಾವುದೇ ರಾಜ್ಯದವರೂ , ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯವೂ ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ.
ಈ ಬಾರಿಯ ರಾಜ್ಯದ ಬಜೆಟ್ ಗಾತ್ರ 372273 ಕೋಟಿ, 27674 ಕೋಟಿಗೆ 7.46%.
ಉತ್ತರಪ್ರದೇಶದಲ್ಲಿ 4.56 % , ಗುಜರಾತ್ ನಲ್ಲಿ ಎಸ್ ಸಿ ಪಿ 2.38 % , ಮಹಾರಾಷ್ಟ್ರದಲ್ಲಿ 612293 ಕೋಟಿ ಬಜೆಟ್ ಗಾತ್ರ , 18765 ಕೋಟಿ – 3.06% , ಕೇಂದ್ರ ಸರ್ಕಾರ 48.20 ಲಕ್ಷ ಕೋಟಿ ಬಜೆಟ್ ನಲ್ಲಿ ದಲಿತರಿಗೆ 1.38,362 ಕೋಟಿ ನೀಡಿದೆ. ಅಂದರೆ 2.87 % ಮಾತ್ರ.
ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ 7D ಅಡಿ Deemed expenditure ನಿಯಮವನ್ನು ಯಾಕೆ ತೆಗೆಯಲಿಲ್ಲ.
ಕರ್ನಾಟಕ ರಾಜ್ಯದಂತೆ SCSP –TSP ಕಾಯ್ದೆಯನ್ನು ದೇಶದಲ್ಲೆಡೆ ತರಲು ಕೇಂದ್ರಕ್ಕೆ ಒತ್ತಾಯಿಸಿ ರೆಸುಲ್ಯೂಷನ್ ತರಲಿ , ನಾವೆಲ್ಲರೂ ಬೆಂಬಲಿಸುತ್ತೇವೆ ಎಂದರು.
7ಡಿ ತೆಗೆಯುವ ಮುಂಚೆ 22-23 ರಲ್ಲಿ SCSP –TSPಯ 2412 ಕೋಟಿ ದುರುಪಯೋಗವಾಗಿದೆ. SCSP –TSP ಯ ಅನುದಾನ ದುರ್ಬಳಕೆಯಾಗಿದೆ ಎನ್ನಲು ಪ್ರತಿಪಕ್ಷದವರಿಗೆ ನೈತಿಕತೆ ಇಲ್ಲ.
ಬಿಜೆಪಿಯವರು SCSP –TSP ಕಾಯ್ದೆಯನ್ನು ಜಾರಿಗೆ ತರಲಿಲ್ಲ. ಕಾಂಗ್ರೆಸ್ ಸರ್ಕಾರದವರು SCSP –TSP ಕಾಯ್ದೆ ತರುವ ಜೊತೆಗೆ ಮುಂಬಡ್ತಿ ಮೀಸಲಾತಿಯನ್ನೂ ಜಾರಿಗೆ ತಂದಿತು.
ಮುಂಬಡ್ತಿ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ.
ವಿರೋಧಪಕ್ಷದವರು ದಲಿತರ ಪರ ಕೇವಲ ಮಾತಾಡಿ ಮೊಸಳೆ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಗುತ್ತಿಗೆಯಲ್ಲಿ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರ.
ಗ್ಯಾರಂಟಿಗಳನ್ನು ವಿದೇಶಿಗರೂ, ವಿರೋಧಪಕ್ಷಗಳು, ವಿಧ್ವಾಂಸಗಳು, ವಿಶ್ವವಿದ್ಯಾಲಯಗಳನ್ನು ಪ್ರಶಂಸಿದ್ದಾರೆ. ಆದರೆ ವಿರೋಧಪಕ್ಷದವರಿಗೆ ಎಸ್ ಸಿ/ ಎಸ್ ಟಿ ವರ್ಗದವರೆಡೆಗೆ ಬದ್ಧತೆ ಇಲ್ಲದೆ , ಅವರಿಗೆ ಪೂರಕವಾದ ಯಾವ ಕಾನೂನನ್ನು ತರಲಿಲ್ಲ.
ಮೈಕ್ರೊ ಹಣಕಾಸಿನ ಸಂಸ್ಥೆಗಳಿಗೆ ನಿಯಂತ್ರಣಾ ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದು , ತೊಂದರೆಗೊಳಗಾದ ಜನರು ಈಗ ನೆಮ್ಮದಿ ಕಾಣುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದ್ದು, ರಾಜ್ಯದ ಆದಾಯ ಹೆಚ್ಚಿದರೂ, ಜನರ ಆಧಾಯ ಕಡಮೆಯಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. 2022-23 ರಲ್ಲಿ ಬೆಂಗಳೂರಿನಲ್ಲಿ ತಲಾ ಅದಾಯ 458789 ರೂ ಇತ್ತು.
23-24 ರಲ್ಲಿ 501383, ಬೆಳಗಾವಿ 181911 ರೂ. ನಮ್ಮ ಸರ್ಕಾರದ ಅವಧಿಯ್ಲಿ 200457 , ಕಲ್ಬುರ್ಗಿ 2023-24ರಲ್ಲಿ 173226 ಇದ್ದು, ಈಗ ತಲಾ ಆದಾಯ ಹೆಚ್ಚಿದೆ.
ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ ನಿಜ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 7 ರೂ. ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಮಾಡಿಲ್ಲ ಎಂದಿದ್ದೀರಿ .
ಮುಂದಿನ ದಿನಗಳಲ್ಲಿ ಹೆಚ್ಚು ಮಡುತ್ತೇನೆ. ಹಾಲಿನ ಪ್ರೋತ್ಸಾಹ ಧನವನ್ನು 2ರೂ. ನಿಂದ 5 ರೂ. ಗೆ ಹೆಚ್ಚು ಮಾಡಿದ್ದು ಕಾಂಗ್ರೆಸ್ ಸರ್ಕಾರ.
ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಪ್ರೋತ್ಸಾಹ ಧನ ಹೆಚ್ಚು ಮಾಡಲಿಲ್ಲ.
ಹಿಂದಿನ ಬಿಜೆಪಿ ಸರ್ಕಾರ,2019-20 ರಲ್ಲಿ 364 ಕೋಟಿ ಬಾಕಿ ಉಳಿಸಿದ್ದು, 2020-21 ರಲ್ಲಿ 106 ಕೋಟಿ ,2021-22 ರಲ್ಲಿ 130 ಕೋಟಿಗಳು. ಒಟ್ಟು 600 ಕೋಟಿ ರೂ.ಗಳ ಪ್ರೋತ್ಸಾಹ ಧನ ಬಾಕಿಯನ್ನು ಬಿಜೆಪಿ ಸರ್ಕಾರ ಬಿಟ್ಟು ಹೋಗಿತ್ತು.
ಈ ಬಾಕಿಯನ್ನು ನಾವು ಪೂರ್ತಿ ತೀರಿಸಿದ್ದೇವೆ. 8.16 ಲಕ್ಷ ಹಾಲು ಉತ್ಪಾದಕರು ಇದರ ಲಾಭ ಪಡೆಯುತ್ತಿದ್ದಾರೆ.
ಬಿಜೆಪಿ ಸರ್ಕಾರ ಬಿಟ್ಟು ಹೋಗಿರುವ ಸಂಪೂರ್ಣ ಬಾಕಿಯನ್ನು ನಮ್ಮ ಸರ್ಕಾರ ತೀರಿಸಿ ಮುಂದಿನ ಬಾರಿ ಉಳಿತಾಯ ಬಜೆಟ್ ಮಂಡಿಸಲಿದ್ದೇವೆ.
ಯಡಿಯೂರಪ್ಪನವರು ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಭರವಸೆ ನೀಡಿದರು.ಆದರೆ ಅವರಿಂದ ಯೋಜನೆ ಅನುಷ್ಠಾನಗೊಳಿಸಲಿಲ್ಲ: ಸಿಎಂ
ಗೃಹಲಕ್ಷ್ಮಿ ಹಣ ಆರು ತಿಂಗಳಿಂದ ಬಾಕಿ ಇದೆ ಎಂದು ವಿರೋಧಪಕ್ಷದ ನಾಯಕರು ತಿಳಿಸಿದ್ದಾರೆ. ಇದು ಅಪ್ಪಟ ಸುಳ್ಳು. ಆದರೆ ಗೃಹಲಕ್ಷ್ಮಿ ಯೋಜನೆಯ ಕೇವಲ ಜನವರಿಯಿಂದ ಉಳಿದಿದ್ದು, ಅದನ್ನೂ ಪಾವತಿಸಲಾಗುವುದು.
ಶಿಕ್ಷಣ ಇಲಾಖೆಯಡಿ 11400 ಶಿಕ್ಷಕರ ಕೊರತೆ ಇದೆ. 6400 ಶಾಲೆಗಳಲ್ಲಿ ಏಕ ಶಿಕ್ಷಕರು ಇದ್ದಾರೆ. ಬಿಜೆಪಿಯು 4 ವರ್ಷದಲ್ಲಿ ಎಷ್ಟು ಜನ ಶಿಕ್ಷಕರ ನೇಮಕಾತಿ ಮಾಡಿದ್ದಾರೆಂದು ತಿಳಿಸಲಿ ಎಂದು ಸವಾಲು ಹಾಕಿದರು.
ಎಲ್ಲಾ ದುರ್ಬಲವರ್ಗದವರನ್ನೂ ನಾನು ಪ್ರೀತಿಸುತ್ತೇನೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ವಿವಿ.ಗಳನ್ನು ಮುಚ್ಚುವುದಿಲ್ಲ.
ಆದರೆ ಸಚಿವಸಂಪುಟ ಉಪಸಮಿತಿಯ ವರದಿ ಬಂದ ನಂತರ ವಿವಿಗಳನ್ನು ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ರೈತರ ಆತ್ಮಹತ್ಯೆಗಳು ಹೆಚ್ಚಿರುವ ಬಗ್ಗೆ ಕೇಳಲಾಗಿದೆ. ಆದರೆ ವಾಸ್ತವಿಕವಾಗಿ 40% ವರೆಗೆ ಆತ್ಮಹತ್ಯೆಗಳು ಕಡಿಮೆಯಾಗಿದೆ.
ಫೆಬ್ರವರಿ ಅಂತ್ಯದವರಗೆ 644 ಆಗಿವೆ. ಆತ್ಮಹತ್ಯೆಗಳು ಇಳಿಮುಖವಾಗಿದೆ.
ಬೆಲೆ ಏರಿಕೆಯನ್ನು ಪ್ರಶ್ನಿಸಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 108-125 ಡಾಲರ್ ಇತ್ತು,, ಆಗ ಡೀಸೆಲ್ ಬೆಲೆ 46.59 ಇತ್ತು, ಮೋದಿಯವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 73-76 ಡಾಲರ್ ಇದೆ, ಆದರೆ ಡೀಸೆಲ್ ಬೆಲೆ 90 ರೂ. ಆಗಿದೆ. ಅರ್ದದಷ್ಟು ಬೆಲೆ ಹೆಚ್ಚಾಗಿದೆ. ನಾವು ಎಲ್ಲಾ ಬಾಬ್ತುಗಳಿಂದ 7 ರಿಂದ 8 ಸಾವಿರ ರೂ. ಹೆಚ್ಚಿಸಿದ್ದೇವೆ .
ಆದರೆ ಗ್ಯಾರಂಟಿಗಳಿಗೆ 51 ಸಾವಿರ ಕೋಟಿ ರೂ. ನೀಡಿದ್ದೇವೆ , ನೀರಾವರಿಗೆ ಈ ಬಾರಿ ಸಣ್ಣ ನೀರಾವರಿಗೆ 1000 ಕೋಟಿ ರೂ. ಹೆಚ್ಚಿಸಲಾಗಿದೆ ಎಂದರು.
ಯಡಿಯೂರಪ್ಪನವರು ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ಅವರಿಂದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ.
ಹಿಂದೆ 2013ರಲ್ಲಿ ಕೂಡಲಸಂಗಮದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿಗಳನ್ನು ನೀರಾವರಿಗೆ ಇಡುತ್ತೇವೆ , 56000 ಕೋಟಿ ರೂ.ಗಳನ್ನು ನೀರಾವರಿಗೆ ಖರ್ಚು ಮಾಡಿದ್ದೇವೆ. ಪ್ರತಿ ವರ್ಷ 1.50 ಲಕ್ಷ ಕೋಟಿ ಖರ್ಚು ಮಾಡುತ್ತೇವೆ. ಎಂದಿದ್ದ ಬಿಜೆಪಿಯವರು ನಾಲ್ಕು ವರ್ಷ ಪ್ರತಿ ವರ್ಷ ಕೇವಲ ಸರಾಸರಿ 16 ಸಾವಿರ ಕೋಟಿ ಖರ್ಚು ಮಾಡಿದ್ದೀರಿ.
ಮಹದಾಯಿ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಐತೀರ್ಪು ಬಂದು 13 ವರ್ಷಗಳಾಗಿದೆ, ಆದರೆ ಕೇಂದ್ರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ ಎಂದು ಹೇಳಿದರು.