Latest

ಮಕ್ಕಳನ್ನು ಪತಿಯೊಂದಿಗೆ ಕಳಿಸಬೇಡಿ ಎಂದು ಮಹಿಳೆ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪತಿಯ ಹಿಂಸೆ, ಕಿರುಕುಳ ತಾಳಲಾರದೇ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.

ಬಿಂದುಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. ಪತಿ ಕಿರುಕುಳಕ್ಕೆ ಬೇಸತ್ತು ಬಿಂದುಶ್ರೀ ಹಲವು ದಿನಗಳಿಂದ ತವರು ಮನೆಗೆ ಬಂದು ನೆಲೆಸಿದ್ದಳು. ಕೆಲ ದಿನಗಳ ಬಳಿಕ ಬಂದ ಪತಿ ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಗೆ ಹೋದ ಬಳಿಕ ಮತ್ತೆ ಹಳೇ ಚಾಳಿಯನ್ನೇ ಪತಿ ಮಹಾಶಯ ಮುಂದುವರೆಸಿದ್ದಾನೆ.

Home add -Advt

ಇದರಿಂದ ನೊಂದು ಬೇರೆ ದಾರಿಕಾಣದೇ ಬಿಂದುಶ್ರೀ ತನ್ನ ತಾಯಿಗೆ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ರದಲ್ಲಿ ತಾನು ಸತ್ತ ಬಳಿಕ ತನ್ನ ಮಕ್ಕಳನ್ನು ಪತಿ ಬಳಿಗೆ ಕಳುಹಿಸಬೇಡ. ನೀನಂದುಕೊಂಡಂತೆ ನಿನ್ನ ಅಳಿಯ ಒಳ್ಳೆಯವನಲ್ಲ ಎಂದು ಬರೆದಿದ್ದಾಳೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button