ವಾಘವಾಡೆ: ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್




ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದ ಶ್ರೀ ರವಳನಾಥ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸೋಮವಾರ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಲು ಧಾರ್ಮಿಕ ಉನ್ನತಿಯೂ ಮಹತ್ವದ್ದು. ಜೀರ್ಣೋದ್ಧಾರದ ಕಾಮಗಾರಿಗಳ ಮೂಲಕ ದೇವಸ್ಥಾನಕ್ಕೆ ಹೊಸ ಹೊಳಪು ಬರಲಿದೆ. ಇದರಿಂದಾಗಿ ಗ್ರಾಮದ ಮನೆ ಮನಗಳಿಗೆ ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ದೊರೆಯಲಿದೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಎಲ್ಲ ದೇವಸ್ಥಾನಗಳ ಮಾಹಿತಿಯನ್ನು ಕಲೆಹಾಕಿ, ದೇವಸ್ಥಾನಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರದ ಕೆಲಸ ಕಾರ್ಯಗಳಿಗೆ ಉತ್ಸುಕಳಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹೋದರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಅಪಾರ ಶ್ರಮ ವಹಿಸುತ್ತಿದ್ದಾರೆ. ಮಂದಿರಗಳ ಅಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಬಾಲಕೃಷ್ಣ ಗೋಡ್ಸೆ, ತುಶಾರ್ ತಹಶಿಲ್ದಾರ, ಸಚಿನ ಸಾಮಜಿ, ದೇವಸ್ಥಾನ ಟ್ರಸ್ಟ್ ಕಮೀಟಿಯ ಅಧ್ಯಕ್ಷ ಕಲ್ಲಪ್ಪ ಗುರವ, ರಘುನಾಥ್ ಪಾಟೀಲ, ಬಾವುಕಣ್ಣ ಪಾಟೀಲ, ಶುಭಾಂಗಿ ದೇಸಾಯಿ, ವೈಶಾಲಿ ಕಾಂಬಳೆ, ಸಂತೋಷ ಅಂಬೋಳ್ಕರ್, ರಘುನಾಥ್ ನಾಯಿಕ್, ಪಲ್ಲವಿ ನಾಯಿಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ