Kannada NewsKarnataka News

ರಾಷ್ಟ್ರ ಪುರುಷರಿಗೆ ಅವಮಾನಿಸುವವರ ವಿರುದ್ಧ ಒಂದಾಗಬೇಕಿದೆ

ಮಾನ್ಯರೆ,

ಈಗ ಕೆಲವು ಕಡೆ ರಾಷ್ಟ್ರ ಪುರುಷರ ಪ್ರತಿಮೆಗಳಿಗೆ ಅವಮಾನ ಮಾಡುವ ಒಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಬಾಬಾ ಸಾಹೇಬ ಅಂಬೇಡ್ಕರ,  ಸಂಗೊಳ್ಳಿ, ರಾಯಣ್ಣ,  ಛತ್ರಪತಿ ಶಿವಾಜಿ ಮಹಾರಾಜ ಹೀಗೆ ಸಾವಿರಾರು ರಾಷ್ಟ್ರ  ಪುರುಷರು ತಮ್ಮ ತ್ಯಾಗ  ಬಲಿದಾನ, ತಮ್ಮ ಸಾಮಾಜಿಕ ಕಳಕಳಿಯ ಮೂಲಕ ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಹಿಂದು ಸಮಾಜದ ಸಾಮರಸ್ಯ ಹಾಳುಗೇಡವುವುದೇ ಜನ್ಮ ಸಿದ್ಧ ಹಕ್ಕು ಎಂದು ವಿಕೃತ ಬುದ್ದಿಯಿಂದ  ಯೋಜನಾ ಬದ್ಧ ಷಡ್ಯಂತ್ರ ಮಾಡುತ್ತ ಒಂದು ಗುಂಪು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.

Home add -Advt

ಬಂಧುಗಳೇ ಈಗ ನಮ್ಮ ಸತ್ವ ಪರೀಕ್ಷೆಯ ಸಮಯ. ದುಷ್ಟ ಜನರಿಗೆ ರಾಷ್ಟ್ರ ಪುರುಷರ ಮೇಲೆ ಯಾವ ಪ್ರೀತಿಯೂ ಇರುವುದಿಲ್ಲ. ಅವರು ಮಾಡಿದ ಮಹತ್ ಕಾರ್ಯದ ಬಗ್ಗೆ ಶ್ರದ್ಧೆ ಕೂಡ ಇರುವುದಿಲ್ಲ. ಕೇವಲ ಸಮಾಜ ಜಗಳವಾಡಬೇಕು. ಅಶಾಂತ ಸ್ಥಿತಿ ನಿರ್ಮಾಣವಾಗ ಬೇಕು. ಅದರಲ್ಲೇ ವಿಕೃತ ಆನಂದ ಪಡೆಯುವುದು, ಹಾಗಾಗಿ ಅಂತಹ ದುಷ್ಟರನ್ನು  ಹಿಡಿಮಡಿ ಕಟ್ಟಿ ಒಳಗೆ ಹಾಕಬೇಕು. ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಸಂದರ್ಭದಲ್ಲಿ ನಾವು ಎಲ್ಲಾ ಸಮಾಜದ ಪ್ರಮುಖರು ಒಂದೆಡೆ ಸೇರಿ ಪರಸ್ಪರ ಪ್ರೀತಿಯಿಂದ,  ಶಾಂತಿ ಸೌಹಾರ್ದದಿಂದ ಸಮಸ್ಯೆ ಪರಿಹರಿಸಿಕೊಂಡು ಆ ಮಹಾನ್ ನಾಯಕರಿಗೆ ಆದರ ಪೂರ್ವಕ ಗೌರವ ಸಲ್ಲಿಸೋಣ ಎಂದು ಎಲ್ಲಾ ಸಮಾಜದ ಬಂಧುಗಳಲ್ಲಿ ಕಳ ಕಳಿಯ ಪ್ರಾರ್ಥನೆ.

-ಕೃಷ್ಣ ಭಟ್, ವಿಶ್ವ ಹಿಂದು ಪರಿಷತ್ ಬೆಳಗಾವಿ

Related Articles

Back to top button